ಸಿಎಂ ಕುಮಾರಸ್ವಾಮಿಯವರ ಹುಬ್ಬಳ್ಳಿ ನಿವಾಸದಲ್ಲಿ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraaswamy-House

ಹುಬ್ಬಳ್ಳಿ,ಮೇ.27- ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಗರದ ನಿವಾಸದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಅಂದ ಹಾಗೆ ಈ ವಿಶೇಷ ಪೂಜೆಯನ್ನು ಸಿಎಂ ಕುಮಾರಸ್ವಾಮಿ ನೆರವೇರಿಸಿಲ್ಲ. ಬದಲಿಗೆ ಅವರಿಗೆ ಮನೆ ನೀಡಿದ ಸುರೇಶ ರಾಯರೆಡ್ಡಿಯವರು ಕುಮಾರಸ್ಬಾಮಿ ಅವರಿಗೆ ಒಳ್ಳೆಯದಾಗಲಿ ಎಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು.

ನಗರದ ಬೈರುದೇವರಕೊಪ್ಪದ ಮಾಯಕಾರ ಕಾಲೋನಿಯ ಮನೆಯನ್ನು ಕಳೆದ ಒಂದೂವರೆ ವರ್ಷಗಳ ಹಿಂದೆ ಸುರೇಶ ರಾಯರೆಡ್ಡಿಯವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೀಡಿದ್ದರು.   ಯಾವುದೇ ಬಾಡಿಗೆ ಪಡೆಯದೆ ಕುಮಾರಸ್ವಾಮಿಯವರಿಗೆ ಮನೆಯನ್ನು ನೀಡಿದ ರಾಯರೆಡ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಹರಕೆ ಹೊತ್ತಿದ್ದರು.

ಅದರಂತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರಿಂದ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿಯರ ಮುಖ್ಯಮಂತ್ರಿಗಳಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲಿ, ರೈತರ ಸಾಲಮನ್ನಾ ಮಾಡಲಿ, ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

Facebook Comments

Sri Raghav

Admin