ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :   ಎಲೈ ಕಾಲಕೂಟವಿಷವೇ..! ನೀನು ಮೆಟ್ಟಿಲು ಮೆಟ್ಟಿಲಾಗಿ ಹೆಚ್ಚು ಉತ್ತಮವಾದ ನೆಲೆಯನ್ನಾರಿಸಿ ಕೊಂಡಿದ್ದೀಯೆ..! ನಿನಗೆ ಇದನ್ನು ಹೇಳಿಕೊಟ್ಟವರಾರು..? ಮೊದಲು ನೀನು ಸಮುದ್ರದ ನಡುವೆ ಇದ್ದೆ. ಆಮೇಲೆ ಈಶ್ವರನ ಕಂಠವನ್ನು ಸೇರಿದೆ. ಈಗ ದುಷ್ಟರ ಮಾತಿನಲ್ಲಿರುವೆ..! –ಭಲ್ಲಟಶತಕ

Rashi

ಪಂಚಾಂಗ : ಸೋಮವಾರ, 28.05.2018

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.41
ಚಂದ್ರ ಉದಯ ಸಂ.05.44 / ಚಂದ್ರ ಅಸ್ತ ಸಂ.05.37
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಸಾ.06.41)
ನಕ್ಷತ್ರ: ವಿಶಾಖ (ರಾ.11.04) / ಯೋಗ: ಪರಿಘ (ಸಾ.05.18)
ಕರಣ: ಗರಜೆ-ವಣಿಜ್ (ಬೆ.06.16-ಸಾ.06.41)
ಮಳೆ ನಕ್ಷತ್ರ: ರೋಹಿಣಿ / ಮಾಸ: ವೃಷಭ / ತೇದಿ: 14

ರಾಶಿ ಭವಿಷ್ಯ  :  

ಮೇಷ : ಆತ್ಮ ವಿಶ್ವಾಸ ಜಾಸ್ತಿ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀಯರಿಂದ ಸಹಾಯ ಸಿಗುತ್ತದೆ
ವೃಷಭ : ಮನೆಯಲ್ಲಿ ಸಂತೋಷದ ವಾತಾವರಣ ವಿರುತ್ತದೆ, ಕುಶಲ ಕರ್ಮಿಗಳಿಗೆ ಉತ್ತಮ ದಿನ
ಮಿಥುನ: ಎಲ್ಲರೂ ನಿಮ್ಮ ಮಾತಿಗೆ ಗೌರವ ಕೊಡುವರು, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ
ಕಟಕ : ಸಾಮಾಜಿಕ ಕಾರ್ಯ ದಲ್ಲಿ ಪ್ರಗತಿ ಸಾಧಿಸುವಿರಿ
ಸಿಂಹ: ಬಂಧು-ಮಿತ್ರರು ನಿಮ್ಮ ಬಗ್ಗೆ ಅಸೂಯೆ ಪಡುವರು
ಕನ್ಯಾ: ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಸಂತಸದಿಂದಿರುವಿರಿ
ತುಲಾ: ಸ್ವ ಪ್ರಯತ್ನದಿಂದ ಉನ್ನತ ಹುದ್ದೆ ಪಡೆಯುವಿರಿ, ದೂರ ಪ್ರಯಾಣ ಮಾಡದಿರಿ
ವೃಶ್ಚಿಕ: ನಿಮ್ಮ ಮಾತೇ ಸರಿ ಎಂದು ವಾದಿಸುವಿರಿ
ಧನುಸ್ಸು: ವಿದೇಶ ಪ್ರಯಾಣದಿಂದ ಯಶಸ್ಸು ದೊರೆಯುತ್ತದೆ, ವಾಹನ ಖರೀದಿಯ ಯೋಗವಿದೆ
ಮಕರ: ತೀರ್ಥಕ್ಷೇತ್ರ ದರ್ಶನ ಮಾಡುವಿರಿ
ಕುಂಭ: ಬದ್ಧ ವೈರಿಗಳು ಆಪ್ತ ಮಿತ್ರರಾಗುವರು
ಮೀನ: ಪತ್ನಿಯ ಜತೆ ಮನಸ್ತಾಪವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin