ತೂಗುತೊಟ್ಟಿಲಿನ ಬೋಲ್ಟ್ ಕಳಚಿ ಬಾಲಕಿ ದುರಂತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Girl

ಅನಂತಪುರ್, ಮೇ 28-ಜೈಂಟ್ ಮೇರಿ-ಗೌ-ರೌಂಡ್ ವೀಲ್ ದುರಂತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟು, ಆರು ಮಕ್ಕಳು ತೀವ್ರ ಗಾಯಗೊಂಡಿರುವ ದುರ್ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸ್ಥಳೀಯ ಮೇಳವೊಂದರಲ್ಲಿ ಸಂಭವಿಸಿದೆ.  ಸ್ಥಳೀಯ ಜನಪ್ರಿಯ ವಸ್ತುಪ್ರದರ್ಶನ ಮತ್ತು ಮೇಳದಲ್ಲಿ ಜೈಂಟ್ ವೀಲ್‍ನ ಟ್ರೋಲಿ ಕಾರಿನ ಬೋಲ್ಟ್ ಕಳಚಿ ತೂಗುತೊಟ್ಟಿಲು ಕೆಳಗೆ ಬಿತ್ತು. ಈ ದುರಂತದಲ್ಲಿ ಅಮೃತಾ (10) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಇತರ ಆರು ಮಕ್ಕಳಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಅನಂತಪುರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೈಂಟ್ ವೀಲ್‍ನಲ್ಲಿ ಮಕ್ಕಳು ಸಂಭ್ರಮಿಸುರುವುದನ್ನು ನೋಡುತ್ತಾ ಪೋಷಕರು ಸಂತೋಷಪಡುತ್ತಿದ್ದರು. ಆದರೆ ಕೆಲವೇ ಸೆಕೆಂಡುಗಳಲ್ಲಿ ನಡೆದ ದುರಂತದಿಂದ ಶೋಕದ ಮಡುಗಟ್ಟಿತು. ಪೊಲೀಸರು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin