ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ 100 ದಿನಗಳನ್ನೂ ಪೂರೈಸುವುದಿಲ್ಲ : ಬಚ್ಚೇಗೌಡ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Bachegowda--BJP
ಹೊಸಕೋಟೆ, ಮೇ 29- ಕಾಂಗ್ರೆಸ್-ಜೆಡಿಎಸ್ ಅಕ್ರಮವಾಗಿ ಮಾಡಿಕೊಂಡಿರುವ ಮೈತ್ರಿ ಸರ್ಕಾರ ಅಪವಿತ್ರವಾಗಿದ್ದು ಈ ಅಪವಿತ್ರ ಮೈತ್ರಿ ಸರ್ಕಾರ ಪತನದಂಚಿನಲ್ಲಿದೆ, ನೂರು ದಿನವೂ ಉಳಿಯೊಲ್ಲ ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದರು. ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಎಚ್.ಡಿ.ಕುಮಾರಸ್ವಾಮಿ ಈಗ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡದೆ ವರಸೆ ಬದಲಾಯಿಸಿದ್ದು ನನ್ನನ್ನು ಮುಖ್ಯಮಂತ್ರಿ ಮಾಡಿರುವುದು ರಾಜ್ಯದ ಜನರಲ್ಲ. ಬದಲಾಗಿ ಕಾಂಗ್ರೆಸ್‍ನ ಶಾಸಕರು ಎಂದು ವಚನ ಭ್ರಷ್ಟರಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ ಬಹುಮತ ಸಾಬೀತು ಪಡಿಸಿ ನಾಲ್ಕೈದು ದಿನ ಆದರೂ ಸಚಿವ ಸಂಪುಟವನ್ನು ರಚನೆ ಮಾಡಲು ಅವರ ಬಳಿ ಆಗುತ್ತಿಲ್ಲ. ಇನ್ನು ರಾಜ್ಯದ ಜನರ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಲ್ಲರು. ಸಚಿವ ಸಂಪುಟ ರಚನೆ ಹೆಸರಿನಲ್ಲಿ ಕಿತ್ತಾಟ ನಡೆಸಿ ಈ ಅಪವಿತ್ರ ಮೈತ್ರಿ ಸರ್ಕಾರ ಆರು ತಿಂಗಳಿನಲ್ಲಿ ಪತನಗೊಳ್ಳುವುದು ಖಚಿತ ಎಂದರು.

ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದ ತಕ್ಣಣ ಅಧಿಕಾರಿಗಳ ಜೊತೆ ಸಭೈ ನಡೆಸಿ ರೈತರ ಸಾಲಮನ್ನಾ ಮಾಡಲು ಆದೇಶಿಸಿ ಅಗತ್ಯ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಮತದಾರರದಿಂದ ತಿರಸ್ಕøತರಾದ ಕಾಂಗ್ರೆಸ್ ಸರ್ಕಾರ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಬೇಷರತ್ ಬೆಂಬಲ ನೀಡಿ ಜೆಡಿಎಸ್‍ಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟು ಬಿಜೆಪಿ ಪಕ್ಷವನ್ನು ತುಳಿಯಲು ಯತ್ನಿಸಿದೆ ಎಂದು ಹೇಳಿದರು. ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಅಬಕಾರಿ ಶ್ರೀನಿವಾಸಯ್ಯ, ತಾಲೂಕು ಬಿಜೆಪಿ ಉಪಾಧ್ಯಕ್ಷ ಡಾ.ಹೆಚ.ಎಂ.ಸುಬ್ಬರಾಜು, ಭಾರತ ಸರ್ಕಾರ ಭವಿಷ್ಯ ನಿಧಿ ಸದಸ್ಯ ವಿ.ವಿಜಯ್ ಕುಮಾರ್, ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಸಿ.ಮುನಿಯಪ್ಪ,, ಟೌನ್ ಅಧ್ಯಕ್ಷ ಬಿ.ವಿ.ಬೈರೇಗೌಡ, ಹೆತ್ತಕ್ಕಿ ಗ್ರಾ.ಪಂ ಉಪಾಧ್ಯಕ್ ಜಗದೀಶ್, ಬಿಜೆಪಿ ತಾ.ಪ್ರಧಾನ ಕಾರ್ಯದರ್ಶಿ ಕೊರಳುರು ಸುರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

Facebook Comments

Sri Raghav

Admin