ಬಿನ್ನಿಪೇಟೆ ವಾರ್ಡ್‍ಗೆ ಜೂ.17ರಂದು ಮರು ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Binnipete
ಬೆಂಗಳೂರು, ಮೇ 29- ತಿರುಪತಿ ಪ್ರವಾಸದ ವೇಳೆ ಹೃದಯಾಘಾತದಿಂದ ಮಹದೇವಮ್ಮ ನಿಧನದಿಂದ ತೆರವಾಗಿರುವ ಬಿನ್ನಿಪೇಟೆ ವಾರ್ಡ್‍ಗೆ ಜೂ.17ರಂದು ಮರು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಜೂ.17ರಂದು ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಪ್ರಕಟವಾಗಲಿದ್ದು, ಜೂ.6ರ ವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದು. ಅಂದೇ ಕೊನೆಯ ದಿನವೂ ಆಗಿದೆ. ಜೂ.7ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂ.9ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

17ರಂದು ಚುನಾವಣೆ ನಡೆದು ತಾಂತ್ರಿಕ ಕಾರಣ ಎದುರಾದರೆ 18ರಂದು ಮರು ಚುನಾವಣೆ ನಡೆಯಲಿದೆ. 19ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಮಹದೇವಮ್ಮ ಪುತ್ರಿ ಐಶ್ವರ್ಯ ಅಖಾಡಕ್ಕೆ: ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಬಿನ್ನಿಪೇಟೆ ವಾರ್ಡ್‍ನಿಂದ ಮಹದೇವಮ್ಮ ಕಾಂಗ್ರೆಸ್‍ನಿಂದ ಆರಿಸಿಬಂದಿದ್ದರು. ಇತ್ತೀಚೆಗೆ ತಿರುಪತಿ ಪ್ರವಾಸ ಕೈಗೊಂಡಿದ್ದಾಗ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಹಾಗಾಗಿ ಮರು ಚುನಾವಣೆ ನಡೆಯಲಿದೆ.

ಮರು ಚುನಾವಣೆಗೆ ಮಹದೇವಮ್ಮ ಪುತ್ರಿ ಐಶ್ವರ್ಯ ಅಖಾಡಕ್ಕೆ ಇಳಿಯಬೇಕಿತ್ತು. ಆದರೆ, ಕಾಂಗ್ರೆಸ್ ಬಿಬಿಎಂಪಿ ಮಾಜಿ ಸದಸ್ಯೆ ವಿದ್ಯಾ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಮೃತ ಮಹದೇವಮ್ಮ ಪತಿ ಬಿ.ಟಿ.ಎಸ್.ನಾಗರಾಜ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆಯಾಗಿದ್ದಾರೆ. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾಗರಾಜ್ ಜೆಡಿಎಸ್ ಪರ ಕೆಲಸ ಮಾಡಿದ್ದರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಮಹದೇವಮ್ಮ ಅವರ ಪುತ್ರಿ ಐಶ್ವರ್ಯ ಕಣಕ್ಕಿಳಿಯುವ ಸಾಧ್ಯತೆ ಇದೆ. ಬಿಜೆಪಿಯಿಂದ ಯಾರು ಅಭ್ಯರ್ಥಿ ಎಂಬುದು ಇನ್ನೂ ಆಖೈರಾಗಿಲ್ಲ.

Facebook Comments

Sri Raghav

Admin