ದ.ಕ ದಲ್ಲಿ ಭಾರಿಮಳೆ : ಶಾಲಾ ಕಟ್ಟಡ ಕುಸಿದು ಶಿಕ್ಷಕರಿಗೆ ಗಾಯ, ಮತ್ತೊಂದು ಶಾಲೆ ಮುಳುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

mangaluru-rain

ದಕ್ಷಿಣ ಕನ್ನಡ, ಮೇ 29-ಬಾರೀ ಮಳೆಯಿಂದಾಗಿ ಶಾಲಾ ಕಟ್ಟಡವೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಶಿಕ್ಷಕಿಯರು ಗಾಯಗೊಂಡಿದ್ದಾರೆ.
ಮಂಗಳೂರು ತಾಲೂಕಿನ ಕುಂದಾಪುರ ಗ್ರಾಮದಲ್ಲಿನ ಶ್ರೀ ನಾರಾಯಣಗುರು ಶಾಲೆಯ ಶಿಕ್ಷಕಿಯರಾದ ಮಮತಾ, ತುಳಸಿ ಎಂಬುವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಬೆಳಿಗ್ಗೆ ಬಾರೀ ಮಳೆ ಬೀಳುತಿತ್ತು ಎಂದಿನಂತೆ ಶಿಕ್ಷಕರು ಬೆಳಿಗ್ಗೆ ಶಾಲೆಗೆ ಬಂದಿದ್ದರು. ಮಳೆ ಬೀಳುತ್ತಿದ್ದರಿಂದ ವಿದ್ಯಾರ್ಥಿಗಳು ತಡವಾಗಿ ಶಾಲೆಗೆ ಬಂದಿದ್ದರಿಂದ ಬಾರಿ ಅನಾಹುತ ತಪ್ಪಿದೆ.

ಅಳಕೆಯ ಗುಜರಾತಿ ಶಾಳೆ ಜಲಾವೃತ

ಜಿಲ್ಲೆಯಾದ್ಯಂತ ಭಾರೀ ವರ್ಷಧಾರೆಯಿಂದ ಶಾಲಾ ಕಟ್ಟಡವೊಂದು ಜಲಾವೃತಗೊಂಡಿತ್ತು. ಮಂಗಳೂರಿನ ಅಳಕೆಯಲ್ಲಿರುವ ಗುಜರಾತಿ ಆಂಗ್ಲಮಾಧ್ಯಮ ಶಾಳೆ ಭಾರೀ ಮಳೆಯಿಂದ ಜಲಾವೃತಗೊಂಡಿತ್ತು. ಶಾಲೆಯಿಂದ ಹೊರಬರಲಾರದೆ ಮಕ್ಕಳು ಆತಂಕಗೊಂಡಿದ್ದರು. ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೋಟ್ ಮೂಲಕ ಮಕ್ಕಳನ್ನು ರಕ್ಷಿಸಿ ಕರೆತಂದಾಗ ಪೋಷಕರು ನಿಟ್ಟುಸಿರು ಬಿಟ್ಟರು.

 

 

Facebook Comments