ಪ್ರಧಾನಿ ಮೋದಿಗೇ ಚಾಲೆಂಜ್ ಹಾಕಿದ ನವರಸ ನಾಯಕ ಜಗ್ಗೇಶ್

ಈ ಸುದ್ದಿಯನ್ನು ಶೇರ್ ಮಾಡಿ

Jaggesh--01

ಬೆಂಗಳೂರು, ಮೇ 29- ನವರಸ ನಾಯಕ ಜಗ್ಗೇಶ್ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಚಾಲೆಂಜ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜಗ್ಗೇಶ್ ಅವರು ಮೊದಲಿನಿಂದಲೂ ಮೋದಿ ಅವರ ಅಪ್ಪಟ ಅಭಿಮಾನಿ ಹಾಗೂ ಬಿಜೆಪಿ ಮುಖಂಡರೂ ಹೌದು. ಹೀಗಿದ್ದರೂ ಮೋದಿಗೆ ಅವರು ಏಕೆ ಸವಾಲು ಹಾಕಿದರು? ಯಾವ ವಿಷಯದ ಬಗ್ಗೆ ಚಾಲೆಂಜ್ ಮಾಡಿದ್ದಾರೆ? ಎಂಬ ನಾನಾ ಪ್ರಶ್ನೆಗಳು ಉದ್ಭವಿಸಿವೆ.

ಜಗ್ಗೇಶ್ ಅವರು ಮೋದಿ ಅವರ ವಿರುದ್ಧ ಚಾಲೆಂಜ್ ಮಾಡಿರುವುದು ರಾಜಕೀಯಕ್ಕೆ ಸಂಬಂಧಪಟ್ಟಂತ ವಿಷಯಕ್ಕಲ್ಲವಂತೆ. ಬದಲಿಗೆ ಫಿಟ್ನೆಸ್ ಕುರಿತು ಅವರು ಚಾಲೆಂಜ್ ಹಾಕಿದ್ದಾರೆ. ಮೋದಿ ಸಂಪುಟದಲ್ಲಿರುವ ಕೇಂದ್ರ ಸಚಿವ ಹಾಗೂ ಕ್ರೀಡಾಪಟು ರಾಜ್ಯವರ್ಧನ್ ಅವರು ಫಿಟ್ನೆನೆಸ್ ಬಗ್ಗೆ ಹಾಕಿರುವ ಸವಾಲನ್ನು ಛಾಲೆಂಜ್ ಆಗಿ ಮೊದಲು ಸ್ವೀಕರಿಸಿದವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ. ನಂತರ ಬಾಲಿವುಡ್‍ನ ನಟ , ನಟಿಯರಾದ ಅನುಷ್ಕಾಶರ್ಮಾ,
ದೀಪಿಕಾಪಡುಕೋಣೆ, ಅಕ್ಷಯ್ ಕುಮಾರ್, ಕ್ರೀಡಾಪಟುಗಳಾದ ಸೈನಾನೆಹ್ವಾಲ್, ಪಿ.ವಿ.ಸಿಂಧು ಅವರು ತಮ್ಮ ಫಿಟ್ನೆನೆಸ್ ಕುರಿತ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಿದ್ದಾರೆ.

ನವರಸನಾಯಕ ಜಗ್ಗೇಶ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದು ತಾವು ಕೂಡ ಮೋದಿ ಅವರ ಸವಾಲನ್ನು ಸಂತಸದಿಂದಲೇ ಸ್ವೀಕರಿಸುತ್ತಿದ್ದೇನೆ ಎಂದು ತಿಳಿಸಿರುವುದರ ಜೊತೆಗೆ ತಾವು ಸತತ 50 ಡಿಪ್ಸ್‍ಗಳನ್ನು ಹೊಡೆದು ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ. ಜಗ್ಗೇಶ್ ಅವರು ಬಾಲ್ಯದಿಂದಲೂ ತಪ್ಪದೇ ಪ್ರತಿದಿನ 50 ಬೈಠಕ್ ಮಾಡ್ತಾರಂತೆ. ಇದರಿಂದ ಅವರ ದೇಹ ಸದೃಢವಾಗಿದೆ. ಇದನ್ನು ಹಲವು ವರ್ಷಗಳಿಂದ ಜಗ್ಗೇಶ್ ಅವರು ಮಾಡಿಕೊಂಡು ಬರುತ್ತಿದ್ದಾರೆ. ಆಗಿನ ಕಾಲ ದಿಂದಲೂ ಗರಡಿಯಲ್ಲಿ ತಾಲೀಮು ಮಾಡಿದ್ದರಿಂದ ಜಗ್ಗೇಶ್ ಅವರು ತಮ್ಮ 55 ನೇ ವಯಸ್ಸಿನಲ್ಲೂ ಚಿರಯುವಕನಂತಿದ್ದಾರೆ.

Facebook Comments

Sri Raghav

Admin