ಬಿಎಸ್ವೈ, ರಾಮುಲು ಮತ್ತು ಪುಟ್ಟರಾಜು ರಾಜೀನಾಮೆ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Ramulu

ನವದೆಹಲಿ, ಮೇ 29- ಲೋಕಸಭೆ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಹಾಗೂ ಜೆಡಿಎಸ್‍ನ ಸಿ.ಎಸ್.ಪುಟ್ಟರಾಜು ಅವರ ರಾಜೀನಾಮೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಂಗೀಕರಿಸಿದ್ದಾರೆ. ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಇವರು, 2018ರ ಮೇನಲ್ಲಿ ನಡೆದ ಕರ್ನಾಟಕ ರಾಜ್ಯ ವಿಧಾನಭೆ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಿಂದ ಬಿ.ಎಸ್.ಯಡಿಯೂರಪ್ಪ, ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮ್ಮೂರು ಕ್ಷೇತ್ರದಿಂದ ಶ್ರೀರಾಮುಲು ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ಕ್ಷೇತ್ರದಿಂದ ಸಿ.ಎಸ್.ಪುಟ್ಟರಾಜು ಜಯ ಸಾಧಿಸಿದ್ದರು.
ಲೋಕಸಭೆ ಬಿಟ್ಟು ರಾಜ್ಯ ರಾಜಕಾರಣದತ್ತ ಮುಖ ಮಾಡಿರುವ ಇವರು, ಈಗ ಪ್ರಬಲ ನಾಯಕರಾಗಿದ್ದಾರೆ. ಕಳೆದ ಮೇ 18ಕ್ಕೆ ಜಾರಿಗೆ ಬರುವಂತೆ ಇವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.

ರಾಜ್ಯದ ಮೂರು ಸ್ಥಾನ ಖಾಲಿ:
ಈ ಮೂವರ ರಾಜೀನಾಮೆಯಿಂದ ಮೂರು ಕ್ಷೇತ್ರದ ಸದಸ್ಯ ಸ್ಥಾನ ಖಾಲಿಯಾಗಿದ್ದು, ಈಗ ಬಿಜೆಪಿ 16, ಕಾಂಗ್ರೆಸ್ 9 ಹಾಗೂ ಜೆಡಿಎಸ್‍ನ ಒಬ್ಬರು ಸದಸ್ಯರಿದ್ದಾರೆ. ಮರು ಚುನಾವಣೆ ಸಾಧ್ಯತೆ ಕಡಿಮೆ ಇದೆ.   ಮುಂದಿನ 2019ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಈಗ ಸಿದ್ಧವಾಗುತ್ತಿವೆ.

Facebook Comments

Sri Raghav

Admin