ಕರಾವಳಿ ಮಳೆಗೆ ಬಲಿಯಾದ ಇಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

mangaluru-male
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಮೃತರ ಕುಟುಂಬಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಲಾ ಐದು ಲಕ್ಷ ರೂ. ಪರಿಹಾರ ವಿತರಿಸಿದರು.  ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳು ಪಾಲಿಕೆ ಅಧಿಕಾರಿಗಳ ಜತೆಗೂಡಿ ಮೃತಪಟ್ಟ ಕೆಪಿಟಿ ಉದಯ ನಗರದ ಮೋಹಿನಿ ಮತ್ತು ಕೊಡಿಯಾಲ್ ಬೈಲ ಪಿವಿಎಸ್ ಕಲಾಕುಂಜ ಸಮೀಪದ ಮುಕ್ತಾ ಬಾಯಿ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೇಳಿದರು.

ಹಲವೆಡೆ ಭೂಕುಸಿತ, ಮನೆ ಗೋಡೆ ಕುಸಿದಿದ್ದು, ಮರಗಳು ರಸ್ತೆಗುರುಳಿವೆ. ಬಹು ಮಹಡಿ ಕಟ್ಟಡ ಮತ್ತು ಮನೆಗಳ ಸುತ್ತ ನೀರು ನಿಂತು ಜನರು ರಕ್ಷಣೆ ಬೇಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಜಂಕ್ಷನ್ ಹಾಗೂ ಪಡೀಲ್ ರೈಲ್ವೆ ಅಂಡರ್‍ಪಾಸ್‍ನಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿಕೊಂಡು ಸವಾರರು ಪರದಾಡುವಂತಾಗಿದೆ. ನಗರದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯ ವಸ್ತುಗಳನ್ನು ಮನೆ ಮನೆಗೆ ಪೂರೈಸುವಂತಹ ಕಾರ್ಯಗಳು ನಡೆದಿವೆ. ಕೆಲ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯ ಕರ್ತರು, ಆರ್‍ಎಸ್‍ಎಸ್ ಸೇರಿದಂತೆ ಹಲವರು ನೆರವಿನ ಹಸ್ತ ನೀಡಿದ್ದಾರೆ.

Facebook Comments