8 ಮಹಿಳೆಯರನ್ನು ರೇಪ್ ಮಾಡಿ ಕೊಲೆ ಮಾಡಿದ ವಿಕೃತಕಾಮಿ ಇವನೇ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Vikruta-kami--01

ಬೆಂಗಳೂರು, ಮೇ 30- ಹಣ ಕೊಡುವುದಾಗಿ , ಆಶ್ರಯ ನೀಡುವುದಾಗಿ ಮಹಿಳೆಯರನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ತಮಿಳುನಾಡಿನ ವಿಕೃತಕಾಮಿಯೊಬ್ಬನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕುಖ್ಯಾತ ಸೈಕೋ ಎಂಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ನಿಗೂಢವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.  ಮೂಲತಃ ತಮಿಳುನಾಡಿನ ದೊರೆ ಅಲಿಯಾಸ್ ಕಪಲ್ ದೊರೆ (46) ಬಂಧಿತ ಸೈಕೋ ಕಿಲ್ಲರ್.

ಗಾರೆ ಕೆಲಸ ಮಾಡಿಕೊಂಡಿದ್ದ ಈತನನ್ನು ಕರ್ನಾಟಕ, ತಮಿಳುನಾಡು ಗಡಿಭಾಗದ ಅತ್ತಿಬೆಲೆ ಚೆಕ್‍ಪೋಸ್ಟ್ ಬಳಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.  ಈತ ವಿಕೃತಕಾಮಿಯಾಗಿದ್ದು ನಗರದ ಮೆಜೆಸ್ಟಿಕ್, ಮಾರ್ಕೆಟ್, ತಮಿಳುನಾಡಿನ ವಿವಿಪುರಂ ಜಿಲ್ಲೆಯ ಹಲವಾರು ಕಡೆಗಳಲ್ಲಿ ಮಹಿಳೆಯರನ್ನು ಪುಸಲಾಯಿಸಿ ಹಣ ಕೊಡುವುದಾಗಿ, ಆಶ್ರಯ ನೀಡುವುದಾಗಿ ನಂಬಿಸಿ ಅವರನ್ನು ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

2010 ರಲ್ಲಿ ಒಬ್ಬ ಮಹಿಳೆ ಕೊಲೆ ಪ್ರಕರಣದ ನಂತರ 2018ರವರೆಗೆ ಸುಮಾರು 8 ಮಹಿಳೆಯರ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಕೊಲೆಯಾದ ಮಹಿಳೆಯರ ಪೈಕಿ ಆತನ ಪತ್ನಿ ಸುಶೀಲಾಳನ್ನು ಸಹ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿದೆ. ಈತ 2002ರಲ್ಲಿ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ 3 ವರ್ಷ ಶಿಕ್ಷೆ ಅನುಭವಿಸಿದ್ದಾನೆ.

ಪತ್ತೆ ಕಾರ್ಯಾಚರಣೆ ನೇತೃತ್ವವನ್ನು ರಾಮನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕ ರಮೇಶ್ ಬಾನೂತ್, ಪೊಲೀಸ್ ಉಪಧೀಕ್ಷಕ ಪುರುಷೋತ್ತಮ್, ಇನ್ಸ್‍ಪೆಕ್ಟರ್ ಸತ್ಯನಾರಾಯಣ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖಾ ತಂಡದ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Facebook Comments

Sri Raghav

Admin