57ನೇ ವಸಂತಕ್ಕೆ ಕಾಲಿಟ್ಟ ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್

ಈ ಸುದ್ದಿಯನ್ನು ಶೇರ್ ಮಾಡಿ

Ravichandran-00001

ಬೆಂಗಳೂರು, ಮೇ 30- ಕನ್ನಡ ಚಿತ್ರರಂಗದ ಕನಸುಗಾರ ವಿ.ರವಿಚಂದ್ರನ್ ಇಂದು 57ನೆ ವಸಂತಕ್ಕೆ ಕಾಲಿಡುತ್ತಿದ್ದು , ಇವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಗಣ್ಯರು ಶುಭಾಶಯ ಕೋರಿದರು. ಸ್ಯಾಂಡಲ್‍ವುಡ್‍ನಲ್ಲಿ ಪ್ರೇಮಲೋಕ ಚಿತ್ರದಿಂದ ಹೊಸ ಅಲೆಯನ್ನೇ ಸೃಷ್ಟಿಸಿದ್ದ ರವಿಚಂದ್ರನ್ ಚಿತ್ರಗಳಲ್ಲಿ ತಾಂತ್ರಿಕತೆಯ ಕೌಶಲ್ಯ ಅಳವಡಿಸಿಕೊಳ್ಳುತ್ತ ರಣಧೀರನಾಗಿ ಮಿಂಚಿದವರು. ಪ್ರೀತಿ-ಪ್ರೇಮದ ಕಥೆಯಾಧಾರಿತ ಚಿತ್ರಗಳಷ್ಟೇ ಅಲ್ಲದೆ ಮನೆದೇವ್ರು, ಪುಟ್ನಂಜ, ಏಕಾಂಗಿಯಂತಹ ವಿಭಿನ್ನ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಿ ನಟನೆ, ನಿರ್ದೇಶನ, ತಾಂತ್ರಿಕತೆ ಬಳಕೆಯಂತಹ ಹಲವು ಆಯಾಮಗಳಲ್ಲಿ ಬೆಳೆದು ನಿಂತವರು.

Ravi-01

ಇವರ ಸುದೀರ್ಘ ಸಿನಿ ಪಯಣದಲ್ಲಿ ಹಲವಾರು ಯಶಸ್ವಿ ಪ್ರಯೋಗಗಳನ್ನು ಮಾಡುತ್ತ ಅದ್ಧೂರಿ ಚಿತ್ರ ನಿರ್ಮಾಣದಲ್ಲೂ ಹೆಸರು ಮಾಡಿದ ರವಿಚಂದ್ರನ್ ಚಿತ್ರಗಳ ಹಾಡುಗಳು ಅಷ್ಟೇ ಹೈಲೆಟ್ ಆದಂತವು.  ಈ ಬಾರಿಯ ಹುಟ್ಟುಹಬ್ಬದಂದು ಅವರ ಪಡ್ಡೆ ಹುಲಿ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು , ಗುರುದೇಶಪಾಂಡೆ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಕೆ.ಎಂ.ಮಂಜು ಪುತ್ರ ನಟಿಸುತ್ತಿರುವ ಜತೆಗೆ ಮನೆದೇವ್ರು ಚಿತ್ರದಲ್ಲಿ ಯಶಸ್ವಿ ಜೋಡಿಯಾಗಿ ಮಿಂಚಿದ್ದ ಸುಧಾರಣಿಯೊಂದಿಗೆ ಮತ್ತೊಮ್ಮೆ ತೆರೆ ಮೇಲೆ ನಟಿಸಿದ್ದಾರೆ.

Ravi--5

ಸದ್ಯದಲ್ಲೇ ಇವರ ವಿನೂತನ ಚಿತ್ರ ರಾಜೇಂದ್ರ ಪೊನ್ನಪ್ಪ ಬಿಡುಗಡೆಗೊಳ್ಳುತ್ತಿದೆ.  ಇಂದು ರವಿಚಂದ್ರನ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆ ಡಾ.ರಾಜ್‍ಕುಮಾರ್ ರಸ್ತೆಯ ಅಭಿಮಾನಿ ವಸತಿಯಲ್ಲಿ ಆಚರಿಸಿಕೊಂಡರು. ಕೈಯಲ್ಲಿ ರೋಸ್ ಹಿಡಿದು ಪ್ರೇಮಲೋಕದ ಸೃಷ್ಟಿಕರ್ತ ರವಿಚಂದ್ರನ್ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಅಭಿಮಾನಿಗಳ ಮುಂದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಇಂದು ಅಭಿಮಾನಿ ವಸತಿಯಲ್ಲಿ ಹುಟ್ಟುಹಬ್ಬದ ಸಮಾರಂಭ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿರಲಿಲ್ಲ . ಕೆಲವು ಮಂದಿ ಮನೆ ಬಳಿಯೂ ಬಂದು ರವಿಚಂದ್ರನ್‍ಗೆ ಶುಭಾಶಯ ಕೋರಿದರು.

Ravi--4

Ravi-3

Facebook Comments

Sri Raghav

Admin