ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನದಿಂದ ಹೊಸ ಕಿರಿಕಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

ds-
ವಿಶ್ವದ ಪ್ರಮುಖ ಮಹಾನಗರಗಳನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಟ್ರಾಫಿಕ್ ಜಾಮ್. ಪೀಕ್ ಅವರ್‍ನಲ್ಲಿ ವಾಹನಗಳ ಸಂಚಾರ ಒತ್ತಡದಿಂದ ಜನರು ಹೈರಾಣಾಗುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಆದರೆ ಇಂಥ ಪ್ರಯೋಗ ಹೊಸ ಸಮಸ್ಯೆಗೆ ಕಾರಣ ವಾಗುತ್ತಿರುವುದು ದುರದೃಷ್ಟಕರ. ಅಮೆರಿಕದ ರಾಜಧಾನಿ ವಾಷಿಂಗ್ಟನ್ ಸೇರಿದಂತೆ ಇತರ ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ds-2

ರಷ್ ಅವರ್‍ನಲ್ಲಿ ಸಂಚಾರ ಒತ್ತಡದಿಂದ ಪಾರಾಗಲು ವಾಷಿಂಗ್ಟನ್ ಜನರು ಹಗುರ ಎಲೆಕ್ಟ್ರಿಕ್ ಸ್ಕೂಟರ್‍ಗಳ ಮೊರೆ ಹೋಗುತ್ತಿದ್ದಾರೆ. ಎರಡು ಸಣ್ಣ ಚಕ್ರಗಳನ್ನು ಹೊಂದಿರುವ ಪುಟ್ಟ ಹಲಗೆ ಮೇಲೆ ನಿಂತು ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ಮೇಲೆ ಜನರು ಸಾಗುತ್ತಿರುವ ದೃಶ್ಯ ಅಲ್ಲಿ ಸಾಮಾನ್ಯ.  ಪೀಕ್ ಅವರ್‍ನಲ್ಲಿ ಸ್ಕೂಟರ್ ಬಳಸುವ ಮೂಲಕ ಟ್ರಾಫಿಕ್ ಜಾಮ್‍ನಿಂದ ಪಾರಾಗುವ ಅನ್ವೇಷಣಾತ್ಮಕ ಪ್ರಯೋಗ ಇದಾಗಿದೆ.. ಆದರೆ ಇದು ತಲೆನೋವಾಗಿ ಪರಿಣಿಸಿರುವುದು ಸುಳ್ಳಲ್ಲ. ಸ್ಯಾನ್ ಫ್ರಾನ್ಸಿಸ್ಕೋ ನಗರದ ಆಟಾರ್ನಿ ಇಂಥ ಸ್ಕೂಟರ್‍ಗಳನ್ನು ಸಾರ್ವಜನಿಕ ಉಪದ್ರವ ಎಂದು ಕರೆದಿದ್ದಾರೆ.

ds--1

ಸ್ಯಾನ್‍ಫ್ರಾನ್ಸಿಸ್ಕೋ ಮತ್ತು ಟೆಕ್ಸಾಸ್ ರಾಜಧಾನಿ ಆಸ್ಟಿನ್‍ನಲ್ಲಿ ಬೇಜವಾಬ್ದಾರಿ ಸವಾರರು ಎಲ್ಲೆಂದರಲ್ಲಿ ಬಿಟ್ಟು ಹೋದ ನೂರಾರು ಸ್ಕೂಟರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು ಮತ್ತು ಪಾದಚಾರಿ ಮಾರ್ಗಗಳ ಮೇಲೆ ಇಂಥ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ.  ಟ್ರಾಫಿಕ್ ಜಾಮ್ ತಪ್ಪಿಸಲು ಹಾಗೂ ವಾಯು ಮಾಲಿನ್ಯ ತಗ್ಗಿಸಲು ಫೆಬ್ರವರಿಯಲ್ಲಿ ಸ್ಕೂಟರ್ ಷೇರಿಂಗ್‍ನನ್ನು ವಾಷಿಂಗ್ಟನ್ ಮತ್ತು ಇತರ ನಗರಗಳಲ್ಲಿ ಜಾ ರಿ ಗೊಳಿಸಲಾಯಿತು. ಎಲೆಕ್ಟ್ರಿಕ್ ಸ್ಕೂಟರ್‍ಗಳು ಗಂಟೆಗೆ 15 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತವೆ. ಆದರೆ ಇದು ಆರಂಭದಲ್ಲಿ ಯಶಸ್ವಿಯಾದರೂ ಇಂಥ ದ್ವಿಚಕ್ರ ವಾಹನಗಳು ಇನ್ನೊಂದು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಮೋಟಾರ್ ಚಾಲಿತ ಸ್ಕೂಟರ್‍ಗಳ ಸವಾರರು ನಿಯಮಗಳನ್ನು ಪಾಲಿಸುತ್ತಿಲ್ಲ. ಕಿರಿದಾದ ರಸ್ತೆಗಳು, ಸೈಡ್‍ವಾಕ್‍ಗಳು ಮತ್ತು ಪಾದಚಾರಿ ಮಾರ್ಗಗಳನ್ನೂ ದ್ವಿಚಕ್ರ ವಾಹನ ಸವಾರರು ಬಳಸುತ್ತಿರುವುದರಿಂದ ಪಾದಚಾರಿ ಗಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ತೊಂದರೆ ಯಾಗುತ್ತಿದೆ.

Facebook Comments

Sri Raghav

Admin