ಉಪೇಂದ್ರ ಕುಟುಂಬದ ಎರಡನೇ ಪೀಳಿಗೆಯ ‘ಸೆಕೆಂಡ್ ಹಾಫ್’ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

2nd-Half-Kannada-movie

ಬೆಳ್ಳಿ ಪರದೆ ಮೇಲೆ ಸಾಕಷ್ಟು ಪೊಲೀಸ್ ಕಥಾನಕವಿರುವ ಚಿತ್ರಗಳು ಬಂದುಹೋಗಿವೆ. ಆ ನಿಟ್ಟಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಈಗ ಪೊಲೀಸ್ ಪೇದೆಯೊಬ್ಬರ ಸುತ್ತ ನಡೆಯುವ ಕಥೆ ತೆರೆಯ ಮೇಲೆ ಬರುತ್ತಿದೆ. ಪೊಲೀಸ್ ಪೇದೆಯೊಬ್ಬಳ ಬದುಕು, ಅವಳು ತನ್ನ ಕಾರ್ಯವ್ಯಾಪ್ತಿಯೊಳಗೆ ಏನೆಲ್ಲವನ್ನೂ ಮಾಡಬಹುದು ಎಂಬುದನ್ನೇ ಇಟ್ಟುಕೊಂಡು ನಿರ್ದೇಶಕ ಯೋಗಿ ದೇವಗಂಗ ನಿರ್ದೇಶನ ಮಾಡಿರುವ ಚಿತ್ರ ಸೆಕೆಂಡ್ ಹಾಫ್.

ನಟಿ ಪ್ರಿಯಾಂಕ ಉಪೇಂದ್ರ ಅವರು ಇದೇ ಮೊದಲ ಬಾರಿಗೆ ಒಬ್ಬ ಮಹಿಳಾ ಪೊಲೀಸ್ ಗೆಟಪ್‍ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ಪ್ರಯತ್ನಕ್ಕೆ ನಿರ್ಮಾಪಕರಾಗಿ ನಾಗೇಶ್ ಬಂಡವಾಳ ಹೂಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವುದು, ಅದರ ಸುಳಿವು ಪತ್ತೆಹಚ್ಚುವುದು ಕಾನ್ಸ್‍ಟೆಬಲ್‍ಗಳೇ. ಆದರೆ ಆ ಸುಳಿವುಗಳ ಸಹಾಯದಿಂದ ಹಿರಿಯ ಅಧಿಕಾರಿಗಳು ಅಪರಾಧಿಗಳನ್ನು ಪತ್ತೆಹಚ್ಚುತ್ತಾರೆ. ಪೇದೆಗಳು ಎಲೆಮರೆಯ ಕಾಯಿಯಂತೆಯೇ ಕೆಲಸ ಮಾಡುತ್ತಿರುತ್ತಾರೆ ಎಂಬ ಸತ್ಯ ಎಲ್ಲರಿಗೂ ತಿಳಿದಿರುವ ವಿಚಾರವೇ.
ವಿಶೇಷವಾಗಿ ಉಪೇಂದ್ರ ಅವರ  ಸಹೋದರನ ಮಗ ನಿರಂಜನ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಥಮ ಚಿತ್ರದಲ್ಲೇ ಒಂದು ವಿಭಿನ್ನ ಪಾತ್ರವನ್ನು ನಿರ್ವಹಸಿದ್ದಾರಂತೆ.

ಈ ಯುವ ಪ್ರತಿಭೆ ನಿರಂಜನ್. ಅಲ್ಲದೆ ಈ ಚಿತ್ರದ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಗಳನ್ನು ಕೂಡ ಇಟ್ಟುಕೊಂಡಿದ್ದಾರೆ.  ಪೊಲೀಸರ ಬದುಕನ್ನು ಸಿನಿಮಾ ಮಾಡಿದ್ದೇನೆ. ಮಹಿಳಾ ಪಿ.ಸಿ.ಗಳ ಬದುಕನ್ನು ವಾಸ್ತವಿಕವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ.  ಕಥೆಗೆ ಎಷ್ಟು ಬೇಕೋ ಅಷ್ಟೇ ಸಂಗೀತ, ತಾಂತ್ರಿಕ ಅಂಶಗಳು ಇವೆ. ಆದಷ್ಟೂ ವಾಸ್ತವಕ್ಕೆ ಹತ್ತಿರವಾಗಿರಬೇಕು ಎಂಬುದು ನಮ್ಮ ಉದ್ದೇಶ ಎನ್ನುತ್ತಾರೆ ನಿರ್ದೇಶಕ ಯೋಗಿ. ಸತ್ಯಜಿತ್, ಶರತ್ ಲೋಹಿತಾಶ್ವ,
ವೀಣಾಸುಂದರ್ ಮುಂತಾದವರು ಪ್ರಮುಖ ತಾರಾಗಣದಲ್ಲಿರುವ ಸೆಕೆಂಡ್ ಹಾಫ್ ಚಿತ್ರಕ್ಕೆ, ಶಿವು ಛಾಯಾಗ್ರಹಣ ಮತ್ತು ಚೇತನ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ  ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರವು ಇದೇ ವಾರ ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಕ ರಮೇಶ್‍ಬಾಬು ಅವರು ತೆರೆ ಮೇಲೆ ತರುತ್ತಿದ್ದಾರೆ. ಇನ್ನೇನಿದ್ದರೂ ಈ ಸೆಕೆಂಡ್ ಆಫ್ ಚಿತ್ರವನ್ನು ಸಿನಿಪ್ರಿಯರು ನೋಡಿ ನಿರ್ಧರಿಸಬೇಕಿದೆ.

Facebook Comments

Sri Raghav

Admin