ಅಮ್ಮನನ್ನು ನೆನೆದು ಭಾವುಕರಾದ ಅಣ್ಣಾವ್ರ ಮಕ್ಕಳು

ಈ ಸುದ್ದಿಯನ್ನು ಶೇರ್ ಮಾಡಿ

Parvatamma--01

ಬೆಂಗಳೂರು, ಮೇ 31- ಪುಸ್ತಕ ಪ್ರೇಮಿಯೆಂದೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ಹಲವಾರು ಕಾದಂಬರಿ ಆಧಾರಿತ ಚಿತ್ರಗಳಿಗೆ ಸ್ಫೂರ್ತಿಯಾಗಿದ್ದ ಪಾರ್ವತಮ್ಮ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗವನ್ನು ಅಗಲಿ ಇಂದಿಗೆ ವರ್ಷ ಕಳೆದಿದೆ. ಇಂದು ಬೆಳಗ್ಗೆ ರಾಜ್‍ಕುಮಾರ್ ಪುತ್ರರಾದ ಡಾ.ಶಿವರಾಜ್‍ಕುಮಾರ್, ರಾಘವೇಂದ್ರರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್ , ನಾಗಮ್ಮ ಸೇರಿದಂತೆ ಕುಟುಂಬದ ಸದಸ್ಯರು ಕಂಠೀರವಾ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.

ದೊಡ್ಮನೆ ಅಮ್ಮನ ನೆನಪು:

Dodmane-amma--01
ಚಿತ್ರರಂಗ ಎಂಬ ಮಹಾಸಾಗರದಲ್ಲಿ ಅಮ್ಮನೆಂದೇ ಬಿಂಬಿತವಾಗಿದ್ದ ಪಾರ್ವತಮ್ಮರಾಜ್‍ಕುಮಾರ್ ಅವರ ಮಧುರ ನೆನಪುಗಳ ಹೂರಣವನ್ನು ಹೊತ್ತ ದೊಡ್ಮನೆ ಅಮ್ಮ ಪುಸ್ತಕವನ್ನು ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಪಾರ್ವತಮ್ಮರಾಜ್‍ಕುಮಾರ್‍ರವರ ಬಾಲ್ಯದ ನೆನಪು, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯನ್ನು ಒಳಗೊಂಡ ಸಂಪಾದಕ ಸಿರಿಗೇರೆ ಯರಿಸ್ವಾಮಿ ಅವರು ಬರೆದಿರುವ ದೊಡ್ಮನೆ ಅಮ್ಮ ಪುಸ್ತಕವನ್ನು ರಾಜ್ ಪುತ್ರರು ಲೋಕಾರ್ಪಣೆಗೊಳಿಸಿದರು.

Amma-4

ಭಾವುಕರಾದ ಪುತ್ರರು:
ಅಮ್ಮನವರು ನಮ್ಮನ್ನು ಅಗಲಿರಬಹುದು ಆದರೆ ಅವರ ಆದರ್ಶ ಹಾಗೂ ಮಾರ್ಗದರ್ಶನ ನಮಗೆ ದಾರಿ ದೀಪವಾಗಿದೆ, ನಾವು ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆಯಲು ಅಮ್ಮನವರ ಆಶೀರ್ವಾದವೇ ಕಾರಣ ಎಂದು ನಟ ಹಾಗೂ ಪುತ್ರ ಶಿವರಾಜ್‍ಕುಮಾರ್ ಭಾವುಕರಾಗಿ ನುಡಿದರು. ತಾಯಿಗಿಂತ ದೇವರಿಲ್ಲ ಮನೆಯೇ ಮೊದಲ ಪಾಠಶಾಲೆ ಎಂಬಂತೆ ನಮಗೆ ಕಷ್ಟ ಬಂದಾಗ ಯಾವ ರೀತಿ ಎದುರಿಸಬೇಕೆಂಬುದನ್ನು ಅಮ್ಮನವರು ನಮಗೆ ಕಲಿಸಿದ್ದಾರೆ ಎಂದು ರಾಘಣ್ಣ ಹೇಳಿದರು.
ನಾನು ನನ್ನ ತಾಯಿಯ ಬಳಿ ಎಲ್ಲ ವಿಷಯ ಗಳನ್ನು ಹಂಚಿಕೊಳ್ಳುತ್ತಿದ್ದೆ ಅಮ್ಮನೇ ನನಗೆ ಸ್ಫೂರ್ತಿ ದೊಡ್ಮನೆ ಅಮ್ಮ ಪುಸ್ತಕ ಬಿಡುಗಡೆ ಆಗಿರುವುದು ನನಗೆ ಸಂತಸ ತಂದಿದೆ ಎಂದು ಪುನೀತ್ ತಿಳಿಸಿದರು.

Amma--3

Amma--2

Amma--01

Facebook Comments

Sri Raghav

Admin