ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ 28ಲಕ್ಷ ರೂ. ಗೆದ್ದ ಭಾರತ ಮೂಲದ ಬಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

Kartik--01

ಹೌಸ್ಟನ್, ಜೂ. 1-ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್ ಬೀ(ಕಾಗುಣಿತ) ಸ್ಪರ್ಧೆಯಲ್ಲಿ ಭಾರತದ ಪ್ರತಿಭೆಗಳ ಪ್ರಾಬಲ್ಯ ಮುಂದುವರಿದಿದೆ. ಸ್ಕೀಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕ ಬಾಲಕ ಕಾರ್ತಿಕ್ ನೆಮ್ಮನಿ (14) ಜಯಸಾಧಿಸಿ, 42,000 ಡಾಲರ್ (28,25,970 ರೂ.ಗಳು) ನಗದು ಹಾಗೂ ಇತರ ಬಹುಮಾನಗಳನ್ನು ಗೆದ್ದಿದ್ದಾನೆ. ಇದರೊಂದಿಗೆ ಸತತ 11ನೇ ವರ್ಷವೂ ಭಾರತೀಯ ಮೂಲದವರ ಪ್ರತಿಭೆ ಸಾಬೀತಾಗಿದೆ.

Kartik--02

ಅಮೆರಿಕದ ಟೆಕ್ಸಾಸ್‍ನ ಮ್ಯಾಕ್‍ಕಿನ್ನೆಯ ಎಂಟನೆ ತರಗತಿ ಬಾಲಕ ಕಾರ್ತಿಕ್ ಹಲವಾರು ಸುತ್ತುಗಳ ಮೂಲಕ ಫೈನಲ್ ತಲುಪಿದ್ದ. ಇದಕ್ಕೂ ಮುನ್ನ ಈತನಿಗೆ ತೀವ್ರ ಸ್ಪರ್ಧೆ ಒಡ್ಡಿದ್ದೂ ಕೂಡ ಭಾರತದ ಬಾಲಕನೇ ಆತನ ಹೆಸರು ನ್ಯಾಸ್ ಮೋದಿ. 516 ಪ್ರತಿಭೆಗಳಲ್ಲಿ ಅಂತಿಮ ಸುತ್ತಿಗೆ ಕಾರ್ತಿಕ್ ಮತ್ತು ನ್ಯಾಸ್ ಆಯ್ಕೆಯಾಗಿದ್ದರು. ಕಾರ್ತಿಕ್ Koinonia ಪದಕ್ಕೆ ಇಂಗ್ಲಿಷ್‍ನಲ್ಲಿ ಸರಿಯಾದ ಕಾಗುಣಿತ ಉಚ್ಚಾರಣೆ ಮಾಡಿ ಬಹುಮಾನ ಗೆದ್ದ. ಅಲ್ಲದೇ ಪ್ರತಿಷ್ಠಿತ 14ನೇ ಚಾಂಪಿಯನ್ ಆಗಿಯೂ ಹೊರಹೊಮ್ಮಿದ. ನನಗೆ ವಿಶ್ವಾಸವಿತ್ತು ಆದರೆ ಇದು ನಿಜಕ್ಕೂ ಸಾಧ್ಯವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಕಾರ್ತಿಕ್ ಪ್ರತಿಕ್ರಿಯಿಸಿದ್ದಾನೆ.

Kartik--04

Kartik--03

Facebook Comments

Sri Raghav

Admin