ಬಂಗಲೆ ಖಾಲಿ ಮಾಡಲು ನಾಲ್ವರು ಮಾಜಿ ಸಿಎಂಗಳ ಸಿದ್ದತೆ

ಈ ಸುದ್ದಿಯನ್ನು ಶೇರ್ ಮಾಡಿ

Mayavarti--01

ಲಕ್ನೋ, ಜೂ. 1-ಸುಪ್ರೀಂ ಕೋರ್ಟ್ ಗಡುವು ಈ ವಾರಾಂತ್ಯಕ್ಕೆ ಕೊನೆಗೊಳಲಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ತನ್ನ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಸರ್ಕಾರಿ ವಸತಿ ಸೌಲಭ್ಯಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಿಗೆ ಮೇ 7ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡುವಂತೆ ಎಸ್ಟೇಟ್ ಇಲಾಖೆ ಮಾಜಿ ಮುಖ್ಯಮಂತ್ರಿಗಳಾದ ನಾರಾಯಣದತ್ತ ತಿವಾರಿ, ಮುಲಾಯಂ ಸಿಂಗ್ ಯಾದವ್, ಕಲ್ಯಾಣ್‍ಸಿಂಗ್, ಮಾಯಾವತಿ, ರಾಜನಾಥ್ ಸಿಂಗ್ ಮತ್ತು ಅಖಿಲೇಶ್ ಯಾದವ್ ಅವರಿಗೆ ನೋಟಿಸ್‍ಗಳನ್ನು ನೀಡಿತ್ತು. ಇವರಲ್ಲಿ ಎನ್.ಡಿ.ತಿವಾರಿ ಮತ್ತು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೊರತುಪಡಿಸಿ ಉಳಿದ ನಾಲ್ವರು ಬಂಗಲೆಗಳನ್ನು ತೆರವುಗೊಳಿಸಲು ಸಮ್ಮತಿಸಿದ್ದಾರೆ.

Facebook Comments

Sri Raghav

Admin