ಸಿಎಂ ಹೆಚ್ಡಿಕೆ – ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಡುವೆ ‘ಪುಟಗೋಸಿ ಫೈಟ್’

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar-hegde-vs-Kumara
ಬೆಂಗಳೂರು. ಜೂ. 02 : ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಜೋರಾಗೆ ನಡೀತಿದೆ ಪುಟಗೋಸಿ ಫೈಟ್. ದೇಶದ ಅತಿ ದೊಡ್ಡ ಪಕ್ಷ ಕಾಂಗ್ರೆಸ್‍ಗೆ ಇಂದು ರಾಜ್ಯದ ಪುಟಗೋಸಿ ಪಾರ್ಟಿಗೆ ಬಗ್ಗಿ ಸಲಾಂ ಹೊಡೆಯುವ ದಯನೀಯ ಪರಿಸ್ಥಿತಿಗೆ ಬಂದಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ‘ ಮಾನ ಮುಚ್ಚಿಕೊಳ್ಳೋಕೆ ಪುಟಗೋಸಿಯೇ ಬೇಕು. ಪ್ರತಿ ಮನುಷ್ಯ ತನ್ನ ಮಾನ ಮುಚ್ಚಿಕೊಳ್ಳೋಕೆ ಪುಟಗೋಸಿ ಬಳಸುತ್ತಾನೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿರುಗೇಟು ತಿರುಗೇಟು ನೀಡಿದ್ದಾರೆ.   ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಿಂದು ಸಂಸ್ಕೃತಿ ರಕ್ಷಣೆ ಮಾಡುತ್ತೇನೆ ಎನ್ನುವ ಅನಂತ್ ಕುಮಾರ್ ಹೆಗಡೆ ಹೇಳಿಕೆ ಅನಾಗರಿಕವಾದುದು, ಅವರ ಸಂಸ್ಕೃತಿ ಏನು ಎಂಬುದನ್ನ ತೋರಿಸುತ್ತದೆ’ ಎಂದಿದ್ದಾರೆ.

ಕುಮಟಾದಲ್ಲಿ ಮಾತನಾಡಿದ್ದ ಸಚಿವ ಅನಂತಕುಮಾರ್ ಹೆಗಡೆ ದೇಶದಲ್ಲೇ ದೊಡ್ಡ ಪಕ್ಷವಾದ ಕಾಂಗ್ರೆಸ್ಗೆ ಸಲಾಂ ಹೊಡೆಯೋ ಸ್ಥಿತಿ ಎದುರಾಗಿದೆ. ‘ಪುಟಗೋಸಿ’ ಪಕ್ಷಕ್ಕೆ ಸಲಾಂ ಹೊಡೆಯುವಂತ ದಯನೀಯ ಸ್ಥಿತಿ ಬಂದಿರುವುದು ಶೋಚನೀಯ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಹೇಳಿದ್ದರು .

ಭಟ್ಕಳದಲ್ಲಿ ಹೇಗೆ ಬಿಜೆಪಿ ಗೆಲ್ಲಬೇಕು ಎಂದು ಹಠ ಇತ್ತೋ ಹಾಗೆ ಇಂದು ಹಳಿಯಾಳ ಕ್ಷೇತ್ರದಲ್ಲಿಯೂ ಬಿಜೆಪಿ ಭಾವುಟ ಹಾರಾಡಬೇಕಿದೆ. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬಿಜೆಪಿ ಸೇರ್ತಾರೋ ಅಥವಾ ನಮ್ಮ ಪಕ್ಷದ ಹೊಸ ಅಭ್ಯರ್ಥಿ ಬರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರೋವರೆಗೂ ನಾನು ರಾಜಕೀಯ ನಿವೃತ್ತಿ ಪಡೆಯಲ್ಲ ಅಂತಾ ಅನಂತಕುಮಾರ್ ಹೆಗಡೆ ಶಪಥ ಮಾಡಿದ್ರು.

Facebook Comments

Sri Raghav

Admin