ಯುವಕನನ್ನು ಬರ್ಬರ ಹತ್ಯೆ ಮಾಡಿ, ದೇವಸ್ಥಾನದ ಬಳಿ ರುಂಡ ಎಸೆದು ಹೋದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Crime--01

ದೊಡ್ಡಬಳ್ಳಾಪುರ,ಜೂ.2- ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ರುಂಡ-ಮುಂಡ ಬೇರ್ಪಡಿಸಿ ದೇವಸ್ಥಾನ ಬಳಿ ರುಂಡ ಎಸೆದು ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾಗಿರುವ ಯುವಕನ ಗುರುತು ಪತ್ತೆಯಾಗಿಲ್ಲ.
ದೊಡ್ಡಬಳ್ಳಾಪುರ ನಗರದ ಶ್ರೀರಾಮ ದೇವಸ್ಥಾನದ ಬಳಿ ಯುವಕನ ರುಂಡ ಪತ್ತೆಯಾಗಿದೆ.

ದುಷ್ಕರ್ಮಿಗಳು ಯುವಕನನ್ನು ಬೇರೆಡೆ ಕೊಲೆ ಮಾಡಿ ರುಂಡ-ಮುಂಡ ಬೇರ್ಪಡಿಸಿ ರುಂಡವನ್ನು ಮಾತ್ರ ಈ ಜಾಗದಲ್ಲಿ ಬಿಸಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬೆಳಗ್ಗೆ ಯುವಕನ ರುಂಡವನ್ನು ಗಮನಿಸಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು,ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಅಲ್ಲದೆ ಕೊಲೆಯಾದ ಯುವಕನ ಮುಂಡಕ್ಕಾಗಿ ಹುಡುಕಾಟ ನಡೆಸಿದ್ದಾರೆ.

Facebook Comments

Sri Raghav

Admin