ಪರ್ಯಾಯ ಇಂಧನ ತೈಲ ಬಳಕೆಗೆ ಕೇಂದ್ರ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Nitin-Ghadkari--02

ಪುಣೆ, ಜೂ. 2-ಪೆಟ್ರೋಲ್ ಮತ್ತು ಡೀಸೆಲ್ ತೈಲ ದರ ಏರಿಕೆ ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಈ ಇಂಧನಕ್ಕೆ ಪರ್ಯಾಯ ತೈಲ ಬಳಕೆಯನ್ನು ಶಾಶ್ವತ ಪರಿಹಾರಿವಾಗಿ ಕಂಡುಕೊಳ್ಳಬೇಕಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಅವರು, ಪರ್ಯಾಯ ತೈಲ ಬಳಕೆ ಮಾರ್ಗೋಪಾಯದ ನಿಟ್ಟಿನಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಥೆನಾಲ್, ಮೆಥೆನಾಲ್, ಬಯೋಡೀಸೆಲ್, ಬಯೋ ಸಿಎನ್‍ಜಿ ಹಾಗೂ ವಿದ್ಯುತ್ ಬಳಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದರು.

ನಾವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಬ್ಸಿಡಿ ನೀಡುತ್ತಿಲ್ಲ. ಬದಲಾಗಿ ಅಡುಗೆ ಅನಿಲ (ಎಲ್‍ಪಿಜಿ) ಸಂಪರ್ಕವನ್ನು 8 ಕೋಟಿ ಜನರಿಗೆ ಒದಗಿಸಿದ್ದೇವೆ ಎಂದು ಕೇಂದ್ರ ಸರ್ಕಾರದ ನಿಲುವನ್ನು ಅವರು ಸಮರ್ಥಿಸಿಕೊಂಡರು.

Facebook Comments

Sri Raghav

Admin