ಮನೆಯಲ್ಲೇ ನವ ವಿವಾಹಿತೆ ಅನುನಾಸ್ಪದ ಸಾವು, ಪತಿ-ಅತ್ತೆ-ಮಾವ ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

Dead-Body-Women

ಚನ್ನಪಟ್ಟಣ, ಜೂ.2- ನವ ವಿವಾಹಿತೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಸಾವನ್ನಪ್ಪಿರುವ ಘಟನೆ ದೇವರಹಳ್ಳಿ ಗ್ರಾಮದಲ್ಲಿ ನಡೆದಿದ್ದು , ಪತಿ, ಅತ್ತೆ-ಮಾವ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹರ್ಷಿತಾ (25) ಮೃತ ಮಹಿಳೆ.  ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಗಂಧನಹಳ್ಳಿ ಮೂಲದ ಇವರು ಹರ್ಷಿತಾ ಬಿಇ ಪದವೀಧರೆಯಾಗಿದ್ದು , ಅವರನ್ನು ಕಳೆದ 6 ತಿಂಗಳ ಹಿಂದೆ ರಾಮನಗರ ಬಳಿಯ ದೇವರಹಳ್ಳಿಯ ಸಾಫ್ಟ್‍ವೇರ್ ಎಂಜಿನಿಯರ್ ಹರ್ಷಿತ್‍ಗೆ ಕೊಟ್ಟು ಮದುವೆ ಮಾಡಲಾಗಿತ್ತು.

ಇಂದು ಬೆಳಗ್ಗೆ ಕೋಣೆಯಲ್ಲಿ ಹರ್ಷಿತಾ ಮೃತ ದೇಹ ಪತ್ತೆಯಾಗಿದೆ. ಆದರೆ ಮನೆಯಲ್ಲಿದ್ದ ಎಲ್ಲರೂ ಪರಾರಿಯಾಗಿದ್ದಾರೆ. ಅಳಿಯ ಮತ್ತು ಕುಟುಂಬ ಸದಸ್ಯರು ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೂ ವಿಷದ ಮಾತ್ರೆ ನೀಡಿ ಆಕೆಯನ್ನು ಕೊಲೆ ಮಾಡಲಾಗಿದೆ ಮೃತಳ ತಂದೆ ನಾಗರಾಜೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.  ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin