ನದಿ ದಾಟಲು ಝಿಪ್ ಲೈನ್ ಬಳಕೆ ಅನಿವಾರ್ಯ, ಆದರೂ ಇದುವೇ ಈ ಬೆಟ್ಟದೂರಿಗರ ಸಾಹಸ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಚೀನಾದ ಪರ್ವತ ಗ್ರಾಮ ಲಜಿಮಿ ನಿವಾಸಿಗಳನ್ನು ಸಾಹಸಿಗಳು ಎಂದು ಕರೆಯಬೇಕು.. ಏಕೆ ಗೊತ್ತಾ..? ಇವರು ಬೆಟ್ಟದ ಮೇಲಿಂದ ಮಾರುಕಟ್ಟೆಗೆ ಹೋಗಲು ನದಿ ದಾಟಬೇಕು. ಇದಕ್ಕಾಗಿ ಇವರು ಝಿಪ್‍ಲೈನ್ ಬಳಸುತ್ತಾರೆ. ಎರಡು ಪರ್ವತಗಳ ಮಧ್ಯದಲ್ಲಿರುವ ಕಣಿವೆ ಅಥವಾ ಭೋರ್ಗರೆಯುವ ನದಿಯನ್ನು ಸುರಕ್ಷಿತ ವಾಗಿ ದಾಟಲು ಬಳಸುವ ತಂತಿಯನ್ನು ಝಿಪ್‍ಲೈನ್ ಎನ್ನುವರು.

ಚೀನಾದ ಪರ್ವತ ಗ್ರಾಮ ಲಜಿಮಿ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿನ ನಿವಾಸಿಗಳು ಮಾರುಕಟ್ಟೆಗೆ ತೆರಳಬೇಕಾದರೆ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟ ದಾಟಬೇಕು. ಮಧ್ಯದಲ್ಲಿ `ನು’ ಎಂಬ ನದಿ ರಭಸದಿಂದ ಹರಿಯುತ್ತದೆ. ಮ್ಯಾನ್ಮಾರ್ ಗಡಿಯುದ್ದಕ್ಕೂ ಟಿಬೆಟ್‍ನಿಂದ ಯುನಾನ್ ಪ್ರಾಂತ್ಯದ ಮೂಲಕ ಈ ನದಿ ಭೋರ್ಗರೆಯುತ್ತಾ ಸಾಗುತ್ತದೆ. ಈ ನದಿ ದಾಟಲು ಸೇತುವೆ ನಿರ್ಮಾಣವಾಗಿಲ್ಲ. ಇದಕ್ಕಾಗಿ ಗ್ರಾಮಸ್ಥರು ಕಂಡುಕೊಂಡ ಮಾರ್ಗ ಝಿಪ್ ಲೈನ್.
ದುರ್ಗಮ ಮತ್ತು ಪರಿತ್ಯಕ್ತ ಪ್ರದೇಶದಲ್ಲಿ ಸೂಕ್ತ ರಸ್ತೆಗಳು ಮತ್ತು ಸೇತುವೆಯ ಕೊರತೆ ಇದೆ. ಹೀಗಾಗಿ ಇಲ್ಲಿ ಲಿಸು ಜನಾಂಗದವರು ದಶಕಗಳಿಂದ ಝಿಪ್‍ಲೈನ್‍ಗಳನ್ನು ಬಳಸುತ್ತಿದ್ದಾರೆ.

ds-1

ಚೀನಾದ ಆಗ್ನೇಯ ಭಾಗದಲ್ಲಿ ರುವ ಈ ಗ್ರಾಮದ ಕೆಲವು ಪುರುಷರು ಈ ಝಿಪ್‍ಲೈನ್‍ನನ್ನು ನಿರ್ವಹಿಸುತ್ತಾರೆ. ಗ್ರಾಮಸ್ಥರಿಗೆ ಇದು ಸಂಪೂರ್ಣ ಉಚಿತ. ಆದರೆ ಪ್ರೇಕ್ಷಕರು ಮತ್ತು ಪ್ರವಾಸಿಗರು ಇದರ ಅನುಭವ ಪಡೆಯಬೇಕಾದರೆ 8 ಡಾಲರ್ ಶುಲ್ಕ ಪಾವತಿಸಬೇಕು. ಚಾ ಹ್ಯೂಲಾನ್ ಎಂಬ ಇಬ್ಬರು ಮಕ್ಕಳ ತಾಯಿ, ಔಷಧಿ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಆಗಾಗ ತನ್ನ ಎರಡು ವರ್ಷ ಮಗುವಿನೊಂದಿಗೆ ಝಿಪ್‍ಲೈನ್ ಬಳಸುತ್ತಾಳೆ. ಇದು ಅನಾನುಕೂಲ ಮತ್ತು ಕೆಲವೊಮ್ಮೆ ಅಪಾಯಕಾರಿ ಯಾದರೂ ಈ ಗ್ರಾಮಸ್ಥರಿಗೆ ಅನ್ಯಮಾರ್ಗವಿಲ್ಲ. ಹೀಗಾಗಿ ಇದು ಅವರ ಜೀವನಾಡಿಯಂತಾಗಿದೆ.  ಈ ಗ್ರಾಮದ 30ಕ್ಕೂ ಹೆಚ್ಚು ಜನರಿಗೆ ಇದೇ ಸಾರಿಗೆ ಮಾರ್ಗವಾಗಿದೆ. ಇಲ್ಲಿ ಸೇತುವೆ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆ ಇನ್ನೂ ಈಡೇರಿಲ್ಲ. ಆದರೆ ಇದರ ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಭರದಿಂದ ಸಾಗಿದೆ.

Facebook Comments

Sri Raghav

Admin