ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ 10 ಕುರಿಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Goat
ಗೌರಿಬಿದನೂರು, ಜೂ.3- ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಚನ್ನಬೈರೇನಹಳ್ಳಿ ಗ್ರಾಮದಲ್ಲಿ ಜರುಗಿದೆ. ಕದಿರಪ್ಪ ಎಂಬುವರ 7 ಕುರಿಗಳು, ನರಸಪ್ಪ ಎಂಬುವರ 3 ಕುರಿಗಳು ರಪ್ಪದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಮೃತಪಟ್ಟಿವೆ. ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಚನ್ನಬೈರೇನಹಳ್ಳಿ ಗ್ರಾಮದಲ್ಲಿ ಮನೆಯ ಪಕ್ಕದಲ್ಲಿ ವಿದ್ಯುತ್ ಕಂಬವಿದ್ದು, ಅದನ್ನು ಸೇರಿಸಿಕೊಂಡು ತಾತ್ಕಾಲಿಕವಾಗಿ ಕುರಿರಪ್ಪವನ್ನು ನಿರ್ಮಾಣ ಮಾಡಿ 27 ಕುರಿಗಳನ್ನು ರಪ್ಪದಲ್ಲಿ ಪ್ರತಿ ದಿನ ರಾತ್ರಿ ವೇಳೆಯಲ್ಲಿ ಕೂಡಿ ಹಾಕಲಾಗುತ್ತಿತ್ತು, ಮಳೆಯಿಂದಾಗಿ ವಿದ್ಯುತ್ ಕಂಬ ಗ್ರೌಂಡ್ ಆಗಿ ಕಂಬದ ಬಳಿ ಮಲಗಿದ್ದ ಕುರಿಗಳು ವಿದ್ಯುತ್ ಶಾಕ್‍ನಿಂದ ಸ್ಥಳದಲ್ಲೇ ಮೃತಪಟ್ಟಿದೆ.
10 ಕುರಿಗಳಿಂದ ಸುಮಾರು 80 ಸಾವಿರ ರೂ.ಗಳಷ್ಟು ನಷ್ಟವಾಗಿದೆ ಎಂದು ಕುರಿ ಮಾಲೀಕ ಕದಿರಪ್ಪ ತಿಳಿಸಿದ್ದಾರೆ. ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿ ಚಂದ್ರಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin