“2019ರಲ್ಲಿ ಜನರು ಮತ್ತೆ ನರೇಂದ್ರ ಮೋದಿಯವರನ್ನೇ ಅಧಿಕಾರಕ್ಕೆ ತರುತ್ತಾರೆ”

ಈ ಸುದ್ದಿಯನ್ನು ಶೇರ್ ಮಾಡಿ

Vijay-Rupani--01

ಅಹಮದಾಬಾದ್, ಜೂ.3- ಇತ್ತೀಚಿನ ಉಪಚುನಾವಣೆಗಳು ಮುಂದಿನ ಲೋಕಸಭೆ ಚುನಾವಣೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. 2019ರಲ್ಲಿ ಜನರು ಮತ್ತೆ ನರೇಂದ್ರ ಮೋದಿಯವರನ್ನೇ ಅಧಿಕಾರಕ್ಕೆ ತರಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ. ಸೈದ್ಧಾಂತಿಕ ಭಿನ್ನತೆ ಇರುವ ಪಕ್ಷಗಳೆಲ್ಲ ಒಟ್ಟಾಗಿ ಸೇರಿದ್ದು, ಇದು ಹೆಚ್ಚು ಕಾಲ ಉಳಿಯುವುದಿಲ್ಲ. ಅವರಲ್ಲಿ ಅನೇಕ ನಾಯಕರು ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಗಳಿದ್ದಾರೆ. ನರೇಂದ್ರ ಮೋದಿ ಪ್ರಾಬಲ್ಯಕ್ಕೆ ಹೆದರಿ ಅವರೆಲ್ಲ ಒಟ್ಟು ಸೇರಿದ್ದಾರೆ ಎಂದು ಅವರು ಹೇಳಿದರು.

ಇತ್ತೀಚಿನ ಉಪಚುನಾವಣೆ ಫಲಿತಾಂಶಗಳು ಅಷ್ಟೇನೂ ಪರಿಣಾಮ ಉಂಟು ಮಾಡುವುದಿಲ್ಲ, ಮುಂದಿನ ವರ್ಷ ಮತ್ತೊಮ್ಮೆ ಮೋದಿ, ಉತ್ತಮ ಆಡಳಿತ ಮತ್ತು ಜನ ಸ್ನೇಹಿ ನೀತಿಗಳಿಗೆ ಜನಬೆಂಬಲ ಸಿಗಲಿದೆ. ಗುಜರಾತ್‍ನಲ್ಲಿ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ರಾಜ್ಯದಲ್ಲಿ ಸ್ವಚ್ಛ ಆಡಳಿತ ನೀಡುತ್ತಾ ಸಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 26 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವನ್ನು ವಿಶೇಷ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ತುಂಬಾ ಶಕ್ತಿಯುತವಾದುದರಿಂದ ಪ್ರತಿಪಕ್ಷದವರು ಅವರಿಗೆ ಹೆದರಿದ್ದಾರೆ.ಅವರು ತಮ್ಮ ಸಿದ್ದಾಂತದಲ್ಲಿನ ಭಿನ್ನತೆಯ ಹೊರತಾಗಿ ಒಗ್ಗಟ್ಟಾಗಿದ್ದಾರೆ ಎಂದರು. ಬಡತನ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಅತ್ಯಂತ ಮುಖ್ಯವಾದ ಸಂಗತಿ ಎಂದು ನಾವು ಹೇಳುತ್ತೇವೆ, ಆದರೆ ಅವರಿಗೆ ಮೋದಿಯನ್ನು ಕೆಳಗಿಳಿಸುವುದೇ ದೊಡ್ಡ ಗುರಿಯಾಗಿದೆ. ಭಾರತದ ಜನರೇನು ನಿರ್ಧರಿಸುತ್ತಾರೆ ನೋಡೋಣ ಎಂದು ಹೇಳಿದರು.

Facebook Comments

Sri Raghav

Admin