ರೆಪೋ ದರ ಹೆಚ್ಚಿಸಬೇಕೆ ? ಬೇಡವೇ? ಎಂಬ ಕುರಿತು ನಾಳೆ ಆರ್‌ಬಿಐ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

RBI--01
ಮುಂಬೈ, ಜೂ.3-ಹಣದುಬ್ಬರ ಏರಿಕೆ ಹಾಗೂ ಕಚ್ಚಾ ತೈಲಗಳ ಅಧಿಕ ಬೆಲೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ)ಗೂ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಮುಂಬೈನಲ್ಲಿ ಆರಂಭವಾಗುವ ಆರ್‍ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಮೂರು ದಿನಗಳ ಸಭೆಯಲ್ಲಿ ಪ್ರಮುಖ ದರ ನೀತಿ ನಿರ್ಧಾರ ಕುರಿತು ಮಹತ್ವದ ಚರ್ಚೆ ನಡೆಯಲಿದೆ.

ಕಳೆದ ವರ್ಷ ಜನವರಿ-ಮಾರ್ಚ್‍ನಲ್ಲಿ ಶೇ.7.7ರಷ್ಟು ಏಳನೇ ತ್ರೈಮಾಸಿಕ ಅಧಿಕ ಬೆಳವಣಿಗೆ ದರ ಹಾಗೂ ಈ ವರ್ಷ ಸಾಮಾನ್ಯ ಮುಂಗಾರು ಮಳೆ ಮುನ್ಸೂಚನೆ ಹಿನ್ನೆಲೆಯಲ್ಲೂ ನಡೆಯುತ್ತಿರುವ ಈ ಸಭೆಯಲ್ಲಿ ಆರ್‍ಬಿಐನ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಹಣ (ರೆಪೋ) ದರವನ್ನು ಹೆಚ್ಚಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.

ಯಾವುದೇ ಹಣಕಾಸು ಅಭಾವದ ಸಂದರ್ಭದಲ್ಲಿ ಅಧಿಕೃತ ವಾಣಿಜ್ಯ ಬ್ಯಾಂಕುಗಳಿಗೆ ಆರ್‍ಬಿಐ ಹಣ ನೀಡುವ ಹಾಗೂ ಅದರ ಮೇಲೆ ಬಡ್ಡಿದರ ನಿಗದಿಗೊಳಿಸುವಿಕೆಯನ್ನು ರೆಪೋ ಎನ್ನುವರು. ಹಣದುಬ್ಬರ ನಿಯಂತ್ರಿಸಲು ಆರ್ಥಿಕ ಅಧಿಕಾರಿಗಳು ರೆಪೋ ದರವನ್ನು ಬಳಸುತ್ತಾರೆ. ಆರ್‍ಬಿಐ ಕಳೆದ ವರ್ಷ ಆಗಸ್ಟ್‍ನಿಂದ ರೆಪೋ ದರವನ್ನು ಆರ್‍ಬಿಐ ಪರಿಷ್ಕರಿಸಿಲ್ಲ. ಅದು ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಆದರೆ ಪ್ರಸ್ತುತ ಹಣದುಬ್ಬರ ಏರಿಕೆ ಹಾಗೂ ಕಚ್ಚಾ ತೈಲಗಳ ಅಧಿಕ ಬೆಲೆ ಹಿನ್ನೆಲೆಯಲ್ಲಿ ಆರ್‍ಬಿಐ ಕೈಗೊಳ್ಳುವ ನಿರ್ಧಾರ ಕುತೂಹಲ ಕೆರಳಿಸಿದೆ.

ಇನ್ನು ಆರ್‍ಬಿಐನ ಪ್ರಮುಖ ಡೇಟಾ ಚಿಲ್ಲರೆ ಹಣದುಬ್ಬರ (ಸಿಪಿಐ) ಕಳೆದ ವರ್ಷ ನವೆಂಬರ್‍ನಿಂದಲೂ ಶೇ.4ರ ಮೇಲ್ಪಟ್ಟ ಪ್ರಮಾಣದಲ್ಲಿ ಉಳಿದಿದೆ. ಈ ಬಗ್ಗೆಯೂ ನಾಳೆಯಿಂದ ಆರಂಭವಾಗುವ ಸಭೆಯಲ್ಲಿ ಗಹನ ಚರ್ಚೆ ನಡೆಯಲಿದೆ.

Facebook Comments

Sri Raghav

Admin