ಮೆಟ್ರೋ ನೌಕರರ ಮುಷ್ಕರಕ್ಕೆ ಬ್ರೇಕ್ ಹಾಕಿದ ಹೈಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

high-court

ಬೆಂಗಳೂರು, ಜೂ.4- ಯಾವುದೇ ಕಾರಣಕ್ಕೂ ಮೆಟ್ರೋ ನೌಕರರು ಮುಷ್ಕರ ನಡೆಸಬಾರದೆಂದು ಹೈಕೋರ್ಟ್ ಸೂಚನೆ ನೀಡಿದೆ. ಸಿಬ್ಬಂದಿಗಳು ಪ್ರತಿಭಟನೆಗಿಳಿಯದಂತೆ ಜಾರಿ ಮಾಡಿದ್ದ ಎಸ್ಮಾ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಸಮಸ್ಯೆಗೆ ಶವ ಪರೀಕ್ಷೆಗಿಂತ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಸಮಸ್ಯೆ ಬಗೆಹರಿಸಲು ಬಿಎಂಆರ್‍ಸಿಎಲ್ ಮತ್ತು  ಸರ್ಕಾರ ಒಟ್ಟಾಗಿ 10 ದಿನದಲ್ಲಿ ತ್ರಿಪಕ್ಷಿಯ ಸಭೆ ನಡೆಸಬೇಕು. ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಭಾಗಿಯಾಗಬೇಕೆಂದು ತಿಳಿಸಿದೆ. ಜೂ.8ರೊಳಗೆ ಪ್ರಾಥಮಿಕ ಸಮಾಲೋಚನೆ ನಡೆಸಬೇಕು ಹಾಗೂ ಜೂ.18ರೊಳಗೆ ಪೂರ್ಣಗೊಳಿಸಿರುವಂತೆ ಹೇಳಿರುವ ನ್ಯಾಯಾಲಯ ವಿಚಾರಣೆಯನ್ನು ಜೂ.19ಕ್ಕೆ ನಿಗದಿ ಪಡಿಸಿದೆ.

Facebook Comments