6 ತಿಂಗಳಲ್ಲಿ ಯರಗೋಳ್ ನೀರಾವರಿ ಯೋಜನೆ ಪೂರ್ಣ : ಸ್ಪೀಕರ್ ರಮೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar--01
ಬಂಗಾರಪೇಟೆ, ಜೂ.4- ಕೋಲಾರ ಜಿಲ್ಲೆಗೆ ಶಾಶ್ವತ ನೀರನ್ನೊದಗಿಸುವ ವಿಚಾರದಲ್ಲಿ ಎಲ್ಲ ಶಾಸಕರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಇದ್ದು, ಮುಂದಿನ ಆರು ತಿಂಗಳಲ್ಲಿ ಯರಗೋಳ್ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ರಮೇಶ್‍ಕುಮಾರ್ ಹೇಳಿದರು.
ತಾಲ್ಲೂಕಿನ ಯರಗೋಳ್ ಡ್ಯಾಂ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೆಸಿ ವ್ಯಾಲಿ ಯೋಜನೆ ಲೋಕಾರ್ಪಣೆ ಮಾಡುತ್ತಿದ್ದು, ಯರಗೋಳ್ ಯೋಜನೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಈಗ ಮುಹೂರ್ತ ಫಿಕ್ಸ್ ಮಾಡುತ್ತಿದ್ದು, 2019ಕ್ಕೆ ಲೋಕಾರ್ಪಣೆ ಮಾಡುತ್ತೇವೆ ಎಂದರು.

2020ರ ವೇಳೆಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಬಯಲುಸೀಮೆ ಜಿಲ್ಲೆಗಳಿಗೆ ನೀರನ್ನು ಹರಿಸುವ ಮೂಲಕ ಅವರ ಋಣ ತೀರಿಸಿಕೊಳ್ಳುವುದಾಗಿ ತಿಳಿಸಿದರು.
ಯೋಜನೆ ಕಾಮಗಾರಿ ಸ್ಥಳದಲ್ಲಿ 126 ಎಕರೆ ಅರಣ್ಯ ಇಲಾಖೆಯಿಂದ, 132 ಎಕರೆ ಜಮೀನನ್ನು ರೈತರಿಂದ ಮತ್ತು ಉಳಿದ ಸುಮಾರು 100 ಎಕರೆ ಜಾಗ ಗೋಮಾಳ ಜಾಗವನ್ನು ವಶಪಡಿಸಿಕೊಂಡು ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.

ಪೈಪ್‍ಲೈನ್ ಕಾಮಗಾರಿ ಶೇ 80ರಷ್ಟು ಮುಗಿದಿದ್ದು, ಟೇಕಲ್ ಮತ್ತು ಕೋಲಾರದ ರೈಲ್ವೆ ಗೇಟ್‍ಗಳ ಬಳಿ ಪೈಪ್‍ಲೈನ್ ಅಳವಡಿಕೆ ಕಾರ್ಯವನ್ನು ಮಾಡಬೇಕಾಗಿದ್ದು, ಜಿಲ್ಲೆಯ ಎಲ್ಲ ಶಾಸಕರು ಸ್ಪೀಕರ್ ರಮೇಶ್‍ಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚೆ ಮಾಡಿ ಆದಷ್ಟು ಬೇಗನೇ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು. ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಶ್ರೀನಿವಾಸಗೌಡ, ನಾಗೇಶ್, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಲ್ಲಹಳ್ಳಿ ನಾಗರಾಜ್, ಇಇ ವೆಂಕಟೇಶ್‍ಗೌಡ, ಎಇಇ ರವೀಂದ್ರ, ಎಇ ಶಿವರಾಮನಾಯಕ್, ವರ್ಕ್ ಇನ್ಸ್‍ಪೆಕ್ಟರ್ ಕಟಿಮಣಿ, ಪ್ರಾಜೆಕ್ಟ್ ಕೊ-ಆರ್ಡಿನೇಟರ್ ನಾಗಿರೆಡ್ಡಿ, ಮ್ಯಾನೇಜರ್ ತಾರಕ ರಾಮರೆಡ್ಡಿ, ಸೂಪರ್‍ವೈಸರ್ಸ್ ನಾರಾಯಣರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‍ಕುಮಾರ್, ಸಿಪಿಐ ದಿನೇಶ್‍ಪಾಟೀಲ್ ಉಪಸ್ಥಿತರಿದ್ದರು.

Facebook Comments

Sri Raghav

Admin