ಇಂಡಿಯಾ ಬುಕ್ ಅಪ್ ರೆಕಾರ್ಡ್ಸ್ ಸೇರಿದ 4 ವರ್ಷದ ಈ ಪುಟ್ಟ ಬಾಲ(ಲೇಖ)ಕ..!

ಈ ಸುದ್ದಿಯನ್ನು ಶೇರ್ ಮಾಡಿ

4-years-age-author-1
ಲಖಿಮ್‍ಪುರ್ (ಅಸ್ಸಾಂ), ಜೂ.5- ನಾಲ್ಕು ವರ್ಷದ ಮಕ್ಕಳಿಗೆ ಎರಡು ವಾಕ್ಯಗಳನ್ನು ಹೇಳುವುದು ಕಷ್ಟ ಸಾಧ್ಯ. ಆದರೆ ಈಶಾನ್ಯ ರಾಜ್ಯ ಅಸ್ಸಾಂ ನಾಲ್ಕರ ಪೋರನೊಬ್ಬ ಭಾರತದ ಅತ್ಯಂತ ಕಿರಿಯ ಲೇಖಕ ಎಂಬ ಅಪರೂಪದ ಕೀರ್ತಿಗೆ ಪಾತ್ರನಾಗಿದ್ದಾನೆ.  ಅಸ್ಸಾಂನ ಉತ್ತರ ಭಾಗದಲ್ಲಿ ರುವ ಲಖಿಮ್ ಪುರ್‍ದ ಆಯನ್ ಗೊಗೈ ಗೊಹೈನ್ ಈ ಸಾಧನೆ ಮಾಡಿರುವ ಮುದ್ದಾದ ಬಾಲಕ.

ಈ ಪುಟಾಣಿ ಹನಿಕೂಂಬ್ ಎಂಬ ಪುಸ್ತಕದ ಲೇಖಕ. ಈ ವರ್ಷ ಜನವರಿಯಲ್ಲಿ ಇದು ಪ್ರಕಟಗೊಂಡು ಜನಮನ್ನಣೆ ಗಳಿಸಿತ್ತು.  ಲಖಿಮ್‍ಪುರದಲ್ಲಿ ಸೆಂಟ್ ಮೆರೀಸ್ ಶಾಲೆಯ ವಿದ್ಯಾರ್ಥಿ ಯಾದ ಈ ಪ್ರತಿಭಾವಂತ ಬರೆದ ಪುಸ್ತಕ ಈ ವರ್ಷ ಜನವರಿಯಲ್ಲಿ ಪ್ರಕಟ ಗೊಂಡಿತ್ತು. ವಯಸ್ಸಿಗೆ ಮೀರಿದ ಅಗಾಧ ಪ್ರತಿಭೆಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಆಯನ್ ಗೊಗೈ ಗೊಹೈನ್‍ಗೆ ಯಂಗೆಸ್ಟ್ ಆಥರ್ ಆಫ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿದೆ.
ಹನಿಕೂಂಬ್ ಪುಸ್ತಕದಲ್ಲಿ ಈ ಪುಟ್ಟ ಪೋರ ಚಿತ್ರಗಳೊಂದಿಗೆ 30 ಕಿರುಕತೆಗಳು ಮತ್ತು ನೀತಿಕಥೆಗಳಿವೆ. ಈ ಪುಸ್ತಕದ ಬೆಲೆ 250 ರೂ.ಗಳು..

Facebook Comments

Sri Raghav

Admin