ಕಮರಿಗೆ ಬಸ್ ಉರುಳಿ ಬಿದ್ದು 9 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bus--01
ಐಜ್ವಾಲ್, ಜೂ.5-ಕಮರಿಗೆ ಬಸ್ ಉರುಳಿ 9 ಮಂದಿ ಮೃತಪಟ್ಟು ಇತರ 21 ಜನರು ಗಾಯಗೊಂಡಿರುವ ಘಟನೆ ಮಿಜೋರಾಂನ ಲುಂಗ್ಲೀ ಜಿಲ್ಲೆಯ ಪಂಗ್ವಾಲ್ ಗ್ರಾಮದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ರಾಜಧಾನಿ ಐಜ್ವಾಲ್‍ನಿಂದ ಸಿಯಾಹಾ ಪಟ್ಟಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 54ರಲ್ಲಿ 500 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿತ್ತು. ಈ ದುರ್ಘಟನೆಯಲ್ಲಿ 9 ಮಂದಿ ಅಸುನೀಗಿದ್ದಾರೆ. ಗಾಯಗೊಂಡ 21 ಜನರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin