ಬೆಂಗಳೂರಲ್ಲಿ ಬಾರ್ ಮತ್ತು ರೆಸ್ಟೋರೆಂಟ್’ಗಳಿಗೆ ದಿಢೀರ್ ಎಂಟ್ರಿ ಕೊಟ್ಟ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Police-Visit
ಬೆಂಗಳೂರು. ಜೂ. 05 : ಬೆಂಗಳೂರು ನಗರದಲ್ಲಿ ಕ್ರೈಮ್ ಕಂಟ್ರೋಲ್ ಮಾಡಲು ಮುಂದಾಗಿರುವ ಪೊಲೀಸರು ಇಂದು ನಗರ ಹಲವು ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ದಿಢೀರ್ ಭೇಟಿ ನೀಡಿ ದರೋಡೆಕೋರರು, ರೈಡಿಗಳು ಮತ್ತು ಇತರೆ ಕ್ರಿಮಿನಲ್ ಚಿಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ವಿಚಾರಣೆ ನಡೆಸಿದರು. ಇಂದು ಸಂಜೆ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಬೆಂಗಳೂರಿನ ವರ್ತೂರು , ಬೆಳ್ಳಂದೂರು , ಕೆ ಆರ್ ಪುರಂ ಸೇರಿದಂತೆ ಹಲವು ಏರಿಯಾಗಳಲ್ಲಿ ದಿಢೀರ್ ಭೇಟಿ ನೀಡಿ ಬಾರ್ ನಲ್ಲಿ ಕೂತಿದ್ದ ವರನ್ನು ಪರಿಶೀಲಿಸಿ, ವಿಚಾರಣೆ ನಡೆಸಿದರು.

ನಗರದಲ್ಲಿ ಓಲಾ ಕ್ಯಾಬ್ ಗಳಲ್ಲಿ ಲೈಂಗಿಕ ಕಿರುಕುಳಗಳು , ಸರಗಳ್ಳತನ, ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಈ ಕಾರ್ಯಾಚರಣೆ ನಡೆಸಿದರು.

Facebook Comments

Sri Raghav

Admin