ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಬಾಲಕನಾಗಿದ್ದಾಗಲೇ ಪುತ್ರನಿಗೆ ನೀತಿಯನ್ನು ಹೇಳಿ ಪ್ರತಿಯೊಂದು ಕಾರ್ಯದಲ್ಲಿಯೂ ಶಿಕ್ಷಣವನ್ನು ಕೊಡಬೇಕು. ಹಸಿಯ ಗಡಿಗೆಯಲ್ಲಿ ರಚಿಸಿದ ವಿಚಿತ್ರವಾದ ರೇಖೆಗಳು ಗಡಿಗೆಯನ್ನು ಸುಟ್ಟಾಗಲೂ ಅಳಿಸದೆ ಇರುತ್ತವೆ. -ನೀತಿಧನದ-10

Rashi

ಪಂಚಾಂಗ : 06.06.2018 ಬುಧವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.44
ಚಂದ್ರ ಉದಯ ರಾ.12.01 / ಚಂದ್ರ ಅಸ್ತ ಬೆ.11.13
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ಬೆ.11.15)
ನಕ್ಷತ್ರ: ಶತಭಿಷಾ (ರಾ.8.20) / ಯೋಗ: ವಿಷ್ಕಂಭ (ರಾ.11.14)
ಕರಣ: ಭವ-ಬಾಲವ (ಬೆ.11.15-ರಾ.12.02) / ಮಳೆ ನಕ್ಷತ್ರ: ರೋಹಿಣಿ
ಮಾಸ: ವೃಷಭ / ತೇದಿ: 23

ರಾಶಿ ಭವಿಷ್ಯ  :  

ಮೇಷ : ದೇಹಾಲಸ್ಯದಿಂದ ಕೆಲಸದಲ್ಲಿ ನಿಧಾನ
ವೃಷಭ : ಆರೋಗ್ಯ ಸಮಸ್ಯೆ ಉಂಟಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಮಿಥುನ: ಮಾತಿನ ಭರದಿಂದ ಪೇಚಿಗೆ ಸಿಲುಕುವಿರಿ, ಎಚ್ಚರಿಕೆಯಿಂದ ಕೆಲಸ ಮಾಡಿ
ಕಟಕ : ಮನಸ್ಸಿನ ತುಮುಲಗಳನ್ನು ಇತರರೊಂದಿಗೆ ಹಂಚಿಕೊಳ್ಳಿ
ಸಿಂಹ: ಕೆಲಸ-ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಲಿದೆ
ಕನ್ಯಾ: ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಾಗಲಿದೆ
ತುಲಾ: ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ, ಉತ್ತಮ ದಿನ
ವೃಶ್ಚಿಕ : ಕೆಲವು ಮಾತುಗಳಿಂದ ಮಾನಸಿಕವಾಗಿ ನೋವು ಅನುಭವಿಸುವಿರಿ
ಧನುಸ್ಸು: ಉತ್ತಮ ಬಂಡವಾಳ ಹೂಡಿಕೆಗೆ ಸಕಾಲ, ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರಲಿದೆ
ಮಕರ: ದೂರ ಪ್ರಯಾಣದಲ್ಲಿ ಎಚ್ಚರ ವಹಿಸಿ
ಕುಂಭ: ಇತರರ ಅಸೂಯೆಗೆ ಒಳಗಾಗುವಿರಿ
ಮೀನ: ಮತ್ತೊಬ್ಬರ ವಿಷಯಗಳಲ್ಲಿ ತಲೆ ಹಾಕದಿರಿ.


+
 ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments