ಉತ್ತರ ಪ್ರದೇಶದಲ್ಲಿ ಉತ್ಖನನದ ವೇಳೆ ಕಂಚಿನ ಯುಗದ ರಥಗಳು, ಖಡ್ಗಗಳು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

UP--01

ಮೀರತ್, ಜೂ.6-ವಸುಂಧರೆಯ ಒಡಲು ಅನೇಕ ವಿಸ್ಮಯಗಳ ಕಡಲು. ಶತಶತಮಾನಗಳಷ್ಟು ಹಿಂದಿನ ಸಂಗತಿಗಳು ಭೂಗರ್ಭದಲ್ಲಿ ಹುದುಗಿ ಹೋಗಿರುತ್ತವೆ. ಉತ್ಖನನ ವೇಳೆ ಇಂಥ ಅಚ್ಚರಿ ವಿದ್ಯಮಾನಗಳು ಆಗಾಗ ಬೆಳಕಿಗೆ ಬರುತ್ತವೆ. ಉತ್ತರ ಪ್ರದೇಶದಲ್ಲಿ ಕಂಚು ಯುಗದ ಅತ್ಯಂತ ಪ್ರಾಚೀನ ರಥಗಳು ಪತ್ತೆಯಾಗಿರುವುದು ಇದಕ್ಕೆ ಪುರಾವೆಯಾಗಿದೆ.

UP--03

ಉತ್ತರಪ್ರದೇಶದ ಬಾಗ್ಪತ್ ಜಿಲ್ಲೆಯ ಸಿನೌಲಿ ಗ್ರಾಮದಲ್ಲಿ ಭಾರತ ಪುರಾತತ್ತ್ವ ಸರ್ವೇಕ್ಷಣಾ ಸಂಸ್ಥೆ(ಆರ್ಕಿಯೋಲಾಜಿಕಲ್ ಸರ್ವೇ ಆಪ್ ಇಂಡಿಯಾ-ಎಎಸ್‍ಐ)ಗೆ ಕಂಚು-ತ್ರಾಮ ಯುಗದ(ಕಿಸ್ತಪೂರ್ವ 1800-2000) ಪ್ರಾಚೀನ ರಥಗಳ ಅವಶೇಷಗಳು ಪತ್ತೆಯಾಗಿದ್ದು, ಆ ಕಾಲದ ಸಂಸ್ಕøತಿ ಮತ್ತು ನಾಗರಿಕತೆ ಮೇಲೆ ಮತ್ತಷ್ಟು ಸಂಶೋಧನೆಗಳ ಅವಕಾಶವನ್ನು ತೆರೆದಿಟ್ಟಿದೆ. ಪುರಾತತ್ವ ಸಂಶೋಧಕರು ಮತ್ತು ಉತ್ಖನನ ಆಸಕ್ತರಿಗೆ ಬಗೆದಷ್ಟೂ ಸಾರಸ್ಯ ಸಂಗತಿಗಳು ಲಭಿಸುವ ಈ ಪ್ರಾಚೀನ ಸ್ಥಳದಲ್ಲಿ ಎಎಸ್‍ಐ ಕಳೆದ ಮಾರ್ಚ್‍ನಿಂದಲೂ ಸಂಶೋಧನೆ ನಡೆಸುತ್ತಿದೆ. ಇಲ್ಲಿ ದೊರೆತ ಅಪರೂಪದ ಪಳೆಯುಳಿಕೆ ವಸ್ತುಗಳ ಬಗ್ಗೆ ಈಗ ಅಧಿಕೃತ ಮಾಹಿತಿ ನೀಡಿದೆ.

UP--02

ಕಂಚು ಯುಗದಲ್ಲಿ ಬಳಸಲಾಗುತ್ತಿದ್ದ ರಥಗಳ ಅವಶೇಷಗಳೊಂದಿಗೆ ಇಲ್ಲಿ ಎಂಟು ಸಮಾಧಿ ಸ್ಥಳಗಳು, ಮೂರು ಶವ ಪಟ್ಟಿಗೆಗಳು, ಖಡ್ಗ-ಕಠಾರಿ-ಬಾಕುಗಳು, ಬಾಚಣಿಗೆಗಳು ಮತ್ತು ಕಂಚು-ತಾಮ್ರದ ಆಭರಣಗಳೂ ಸೇರಿದಂತೆ ಹಲವು ಪ್ರಾಚೀನ ಕಲಾಕೃತಿಗಳು ಲಭಿಸಿದ್ದು, ಆಗಿನ ನಾಗರಿಕತೆ ಮೇಲೆ ಹೊಸ ಅಧ್ಯಯನಕ್ಕೆ ಪುಷ್ಟಿ ಕೊಟ್ಟಿದೆ.

UP--05

ಗ್ರೀಸ್‍ನ ಮೆಸೊಪೊಟಮಿಯಾದ ಪ್ರಾಚೀನ ನಾಗರಿಕತೆಯನ್ನು ಇದು ಹೋಲುತ್ತದೆ. ಆ ಕಾಲದ ಗ್ರೀಕ್ ವೀರಾಗ್ರಣಿಗಳು ಬಳಸುತ್ತಿದ್ದ ಸಮರ ರಥಗಳು ಮತ್ತು ಶಸ್ತ್ರಾಸ್ತ್ರಗಳಿಗೆ ಇಲ್ಲಿ ದೊರೆತ ಕೆಲವು ವಸ್ತುಗಳು ಹೋಲಿಕೆಯಾಗಿದೆ. ಖಡ್ಗಮಲ್ಲರೂ ಕೂಡ ಈ ಪ್ರಾಂತ್ಯದಲ್ಲಿ ಇದ್ದರು ಎಂಬುದಕ್ಕೆ ಇವು ಸಾಕ್ಷಿಯಾಗಿವೆ ಎಂದು ಉತ್ಖನನದ ಸಹ ನಿರ್ದೇಶಕ ಎಸ್.ಕೆ. ಮಂಜುಳ್ ವಿವರಿಸಿದ್ದಾರೆ. ಇಲ್ಲಿ ಪತ್ತೆಯಾಗಿರುವ ಸಮಾಧಿ ಸ್ಥಳಗಳು ಮತ್ತು ಶವಪಟ್ಟಿಗೆಗಳು ಆ ಕಾಲದ ಅಂತ್ಯಕ್ರಿಯೆ ವಿಧಿ-ವಿಧಾನಗಳ ಬಗ್ಗೆ ಅಸ್ಪಷ್ಟ ಮಾಹಿತಿಯನ್ನೂ ನೀಡಿದೆ. ಇದು ಹರಪ್ಪ-ಮಹೆಂಜೊದಾರೋ ನಾಗರಿಕತೆಗಿಂತ ತೀರಾ ಭಿನ್ನವಾಗಿರುವುದು ಮತ್ತಷ್ಟು ಆಸಕ್ತಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

UP--04

Facebook Comments

Sri Raghav

Admin