ನೂತನ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಸಿಎಂ, ಡಿಸಿಎಂ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Cabinet-XCM

ಬೆಂಗಳೂರು. ಜೂ. 06 : ಇಂದು ನೂತರ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರ  ಸಂಪುಟ ಸಭೆ ನಡೆಸಿದ ಸಿಎಂ ಕುಮಾರಸ್ವಾಮಿ ಬಳಿಕ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು.   ನಮ್ಮ ಸರ್ಕಾರ, ಆಡಳಿತ ಅಂಕುರಿತು ಮಾಧ್ಯಮಗಳು ಬಹು ಕಟುವಾಗಿ ಠೀಕಿಸಿವೆ, ಖಾತೆ ಹಂಚಿಕೆಯ ಬಗ್ಗೆಯೂ ವರದಿ ಮಾಡಿವೆ, ಸರ್ಕಾರ ರಚನೆಗೆ ಒಂದು ಸಮಯ ಎನ್ನುವುದು ಬೇಕು, ಮಾಧ್ಯಮಗಳನ್ಮ ಇದನ್ನ‌ ಅರ್ಥ ಮಾಡಿಕೊಳ್ಳಬೇಕು, ಒಂದೇ ಪಕ್ಷದ ಸರ್ಕಾರ ರಚನೆಗೆ ಸಾಕಷ್ಟು ಸಮಯ ಬೇಕು,  ಇಂತಾದ್ದರಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಮಯ ಬೇಡವೇ? ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು.

27 ಸಚಿವರು ಪ್ರಮಾಣ ಸ್ವೀಕರಿಸಿದ್ದಾರೆ, ಮುಂದೆ ಉತ್ತಮ ಆಡಳಿತವನ್ನ ನೀಡುತ್ತೇವೆ, ಎರಡು ಪಕ್ಷದ ಪ್ರಣಾಳಿಕೆ ಅಂಶಗಳ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ, ಎರಡೂ ಸೇರಿ ಉತ್ತಮ ಅಂಶಗಳನ್ನ ಕಾರ್ಯಗತ ಗೊಳಿಸುತ್ತೇವೆ ಎಂದರು. 2018 ರಲ್ಲಿ ಏನೇನಾಗಿದೆ, ಬಿಜೆಪಿ ಅವಧಿಯಲ್ಲಿ‌ ಸಚಿವ ಸ್ಥಾನಸಿಗದಕ್ಕೆ ಬಸ್ ಗಳನ್ನೇ ಸುಟ್ಟರು, ಹೀಗಾಗಿ ನಮ್ಮದು ಇನ್ನೂ‌ ಹೊಸ ಸರ್ಕಾರ, ಸ್ವಲ್ಪ ಸಮಯಾವಕಾಶ ನೀಡಿ, ಉತ್ತಮ ಆಡಳಿತವನ್ಮ ನಾವು ನೀಡುತ್ತೇವೆ ಎಂದರು.

ನಂತರ ಮಾತಾಡನಾಡಿದಾ ಮುಪಮುಖ್ಯಮಂತ್ರಿ ಪರಮೇಶ್ವರ್ , ನಮ್ಮದು ಸಮ್ಮಿಶ್ರ ಸರ್ಕಾರ, ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಮಯ ಬೇಕು, ರಾಜ್ಯದ ಜನತೆಗೆ ನಾವು ಭರವಸೆ ನೀಡಿದ್ದೇವೆ. ಉತ್ತಮ ಆಡಳಿತ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದೇವೆ, ಆ ಭರವಸೆಯನ್ನ ನಾವು ಈಡೇರಿಸುತ್ತೇವೆ ಎಂದರು. ಬೆಂಗಳೂರು ರಸ್ತೆ ಗುಂಡಿಗಳು, ದಕ್ಷಿಣ ಕನ್ನಡದ ಮಳೆ ಅನಾಹುತದ ಬಗ್ಗೆ ಇರಬಹುದು , ಈ ಎಲ್ಲದರ ಬಗ್ಗೆ ನಾವು ಗಮನಹರಿಸಿದ್ದೇವೆ, ಅಧಿಕಾರಿಗಳಿಗೆ ಸೂಚಿಸಿ ಪರಿಹರಿಸುವ ಕೆಲಸ ಮಾಡಿದ್ದೇವೆ, ಇಂದು ಸಂಪುಟ ರಚನೆಯಾಗಿದೆ, ಇಂದು ಇಲ್ಲವೇ ನಾಳೆ ಖಾತೆ ಹಂಚುತ್ತೇವೆ, ತ್ವರಿತ ಕೆಲಸಗಳಿಗೆ ಗಮನನೀಡುವಂತೆ ಸಚಿವರಿಗೆ ಔಪಚಾರಿಕವಾಗಿ ಸೂಚಿಸಿದ್ದೇವೆ ಎಂದರು.

ಕೆಲವರಿಗೆ ಅಸಮಾಧಾನವಾಗಿರಬಹುದು ಅದನ್ನ ಬಗೆಹರಿಸುವ ಕೆಲಸ ನಾವು ಮಾಡುತ್ತೇವೆ. ಇನ್ನೂ ಆರು ಸ್ಥಾನ ನಾವು ಖಾಲಿ ಇಟ್ಟಿದ್ದೇವೆ, ಜೆಡಿಎಸ್ ನಿಂದ ಒಂದು ಸ್ಥಾನ ಖಾಲಿಯಿಡಲಾಗಿದೆ. ಖಾಲಿ ಸ್ಥಾನಗಳಿಗೆ ಅಗತ್ಯವಿರುವವರಿಗೆ ಅವಕಾಶ ನೀಡುತ್ತೇವೆ ಎಂದರು.

Facebook Comments

Sri Raghav

Admin