ಸಿಲಿಕಾನ್ ಸಿಟಿ ಜನರನ್ನು ರಂಜಿಸಲು ಬರುತ್ತಿದ್ದಾನೆ ವಿಶ್ವವಿಖ್ಯಾತ ಜಾದೂಗಾರ

ಈ ಸುದ್ದಿಯನ್ನು ಶೇರ್ ಮಾಡಿ

alexe-magic
ಬೆಂಗಳೂರು, ಜೂ.6- ವಿಶ್ವವಿಖ್ಯಾತ ಜಾದೂಗಾರ ಅಲೆಕ್ಸ್ ಬ್ಯಾಕ್ ಸಿಲಿಕಾನ್ ಸಿಟಿ ಜನರನ್ನು ಎರಡು ದಿನಗಳ ಕಾಲ ರಂಜಿಸಲಿದ್ದಾರೆ.
ನಗರದ ಪುರಭವನದಲ್ಲಿ ಜೂ.9 ಮತ್ತು 10ರಂದು ನಡೆಯಲಿರುವ ಎರಡು ದಿನಗಳ ಜಾದೂ ಪ್ರದರ್ಶನದಲ್ಲಿ ರಷ್ಯಾದ ಈ ಜಾದೂಗಾರ ತಮ್ಮ ಜಾದೂ ಮೂಲಕ ಎಲ್ಲರನ್ನೂ ಮೋಡಿ ಮಾಡಲಿದ್ದಾರೆ.ತಮ್ಮ ಕೈ ಚಳಕದೊಂದಿಗೆ ಎಲ್ಲರನ್ನೂ ಸಮ್ಮೋಹನಗೊಳಿಸಿ ನಿಬ್ಬೆರಗಾಗುವಂತೆ ಮಾಡಲಿದ್ದಾರೆ.  ಪ್ರತಿ ದಿನ ಮೂರು ಪ್ರದರ್ಶನಗಳಿದ್ದು,ಮಧ್ಯಾಹ್ನ 1.30, ಸಂಜೆ 4.30ಮತ್ತು ರಾತಿ 7.30ಕ್ಕೆ ಪ್ರದರ್ಶನ ಇರಲಿವೆ.ಈ ಪ್ರದರ್ಶನಕ್ಕೆ ಟಿಕೆಟ್‍ಗಳನ್ನು ಬುಕ್ಮೆ ಶೋನಲ್ಲಿ ಖರೀದಿಸಬಹುದಾಗಿದೆ. ಅಲ್ಲದೇ, ಮಾಹಿತಿಗಾಗಿ 9148446679 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ರಷ್ಯಾ ದೇಶದ ಈ ಖ್ಯಾತ ಜಾದೂಗಾರ ನಿರ್ದೇಶಕ, ಡ್ಯಾನ್ಸರ್ ಕೂಡ ಹೌದು, ರಷ್ಯಾದ ಸರಟೊವ್ನಲ್ಲಿ 1989ರ ಜೂ.29ರಂದು ಜನಿಸಿರುವ ಅಲೆಕ್ಲರ್ಕಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಜಾದೂ ಪ್ರದರ್ಶನದ ತಮ್ಮ13 ವರ್ಷಗಳ ವೃತ್ತಿ ಜೀವನದಲ್ಲಿ ಅಲೆಕ್ಸ್ ಅಮೆರಿಕಾ,ಚೀನಾ,ರಷ್ಯಾ, ಮೆಕ್ಸಿಕೊ, ಜರ್ಮನಿ, ಪೋಲೆಂಡ್, ಟರ್ಕಿ, ದುಬೈ, ಕುವೈತ್ ಸೇರಿದಂತೆ ಹತ್ತು ಹಲವಾರು ದೇಶಗಳಲ್ಲಿ ಜಾದೂ ಪ್ರದರ್ಶನ ಮಾಡಿ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

Facebook Comments

Sri Raghav

Admin