ಸೇನಾ ಶಿಬಿರ, ಪೊಲೀಸ್ ಠಾಣೆ ಮೇಲೆ ಉಗ್ರರ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Army-Camp

ಶ್ರೀನಗರ, ಜೂ.6-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ವಿಧ್ವಂಸಕ ಕೃತ್ಯದ ಯತ್ನಗಳು ಮುಂದುವರಿದಿವೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿ ಸೇನಾ ಶಿಬಿರ ಮತ್ತು ಪೊಲೀಸ್ ಠಾಣೆ ಮೇಲೆ ನಿನ್ನೆ ರಾತ್ರಿ ಉಗ್ರರು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಆರು ಭಯೋತ್ಪಾದಕರ ತಂಡವೊಂದು ಎರಡು ಗುಂಪುಗಳಾಗಿ ರಾಷ್ಟ್ರೀಯ ರೈಫಲ್ಸ್ ಮತ್ತು ಹಾಜಿನ್ ಪೊಲೀಸ್ ಠಾಣೆಗಳ ಮೇಲೆ ನಿನ್ನೆ ರಾತ್ರಿ 8.30ರಲ್ಲಿ ದಾಳಿ ನಡೆಸಿ ಗುಂಡಿನ ಮಳೆಗರೆಯಿತು. ತಕ್ಷಣ ಎಚ್ಚೆತ್ತ ಯೋಧರು ಮತ್ತು ಪೊಲೀಸರು ಪ್ರತಿದಾಳಿ ನಡೆಸಿದಾಗ ಉಗ್ರರು ಪರಾರಿಯಾದರು. ಈ ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ.

ಭಯೋತ್ಪಾದರು ಅಂಡರ್‍ಬ್ಯಾರೆಲ್ ಗ್ರೆನೇಡ್ ಲಾಂಚರ್ ಬಳಸಿ ಎಂಟು ಸುತ್ತು ಗುಂಡುಗಳನ್ನು ಹಾರಿಸಿದರು. ಇದಕ್ಕೆ ಭದ್ರತಾ ಪಡೆಗಳು ದಿಟ್ಟ ಮತ್ತು ಪರಿಣಾಮಕಾರಿ ಪ್ರತ್ಯುತ್ತರ ನೀಡಿದ್ಧಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರಾರಿಯಾಗಿರುವ ಭಯೋತ್ಪಾದಕರಿಗಾಗಿ ಈ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.

Facebook Comments

Sri Raghav

Admin