ಚುಂಚನಕಟ್ಟೆ ಫಾಲ್ಸ್’ಗೆ ಪ್ರವಾಸಿಗರ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

Chunchanakate-Falls

ಮೈಸೂರು, ಜೂ.6- ಕೆಆರ್ ನಗರ ತಾಲೂಕಿನ ಪ್ರವಾಸಿ ತಾಣವಾದ ಚುಂಚನಕಟ್ಟೆ ಫಾಲ್ಸ್’ಗೆ ಪ್ರಸ್ತುತ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಕೆಆರ್ ನಗರ ತಹಸೀಲ್ದಾರ್ ಮಹೇಶ್‍ಚಂದ್ರ ಅವರು ಆದೇಶ ಹೊರಡಿಸಿದ್ದು, ಈ ಜಾಗದಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೂ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮೈಸೂರು ಸಿಎಫ್‍ಪಿಆರ್‍ಐನ ವಿಜ್ಞಾನಿ ಸೋಮಶೇಖರ್ ಕುಟುಂಬದವರೊಂದಿಗೆ ಫಾಲ್ಸ್‍ಗೆ ಭೇಟಿ ನೀಡಿದ್ದಾಗ ದುರಂತವೆಂಬಂತೆ ಕುಟುಂಬದವರ ಕಣ್ಣೆದುರೇ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಘಟನೆ ಹಿನ್ನೆಲೆಯಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಫಾಲ್ಸ್ ಸುತ್ತ ಬೇಲಿ ಹಾಕುವುದು ಹಾಗೂ ಫಾಲ್ಸ್‍ನಲ್ಲಿ ನೀರಿನ ಹರಿವು ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡಲು ಧ್ವನಿವರ್ಧಕಗಳನ್ನು ಅಳವಡಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿರುವುದರಿಂದ ಕೆಲ ದಿನಗಳ ಕಾಲ ಫಾಲ್ಸ್‍ಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin