ಟ್ವಿಸ್ಟ್-ಟರ್ನ್-ಥ್ರಿಲ್ ಅನುಭವಕ್ಕೆ ಹೊಸ ರೋಲರ್ ಕೋಸ್ಟರ್ ಆಟ..!

ಈ ಸುದ್ದಿಯನ್ನು ಶೇರ್ ಮಾಡಿ

ds-2
ರೋಲರ್‍ಕೋಸ್ಟರ್ ಮೇಲೆ ಸವಾರಿ ಮಾಡುವುದಕ್ಕೆ ಧೈರ್ಯ ಬೇಕು. ಇದು ನೋಡಲು ಮೋಜಿನ ಸವಾರಿ ಎನಿಸಿದರೂ ಇದರ ಮೇಲೆ ಕುಳಿತಾಗ ಏರಿಳಿತದಲ್ಲಿ ಹೃದಯವೇ ಬಾಯಿಗೆ ಬಂದಂಥ ಅನುಭವವಾಗುತ್ತದೆ. ಥ್ರಿಲ್ ಬಯಸುವ ಮಂದಿಗಾಗಿ ಬ್ರಿಟನ್‍ನಲ್ಲಿ ಟ್ವಿಸ್ಟ್ ಮತ್ತು ಟರ್ನ್‍ಗಳಿರುವ ಹೊಸ ರೋಲರ್ ಕೋಸ್ಟರ್ ಅನಾವರಣಗೊಂಡಿದೆ.  ಬ್ರಿಟನ್‍ನ ಕಡಲ ತಟದ ಪಟ್ಟಣ ಬ್ಲಾಕ್‍ಪೂಲ್‍ನಲ್ಲಿ ಹೊಸ ರೋಲರ್‍ಕೋಸ್ಟರ್ ಆರಂಭವಾಗಿದ್ದು, ಥ್ರಿಲ್ ಬಯಸುವವರಿಗೆ ಮನರಂಜನೆ ಜೊತೆಗೆ ಟರ್ನ್ ಅಂಡ್ ಟ್ವಿಸ್ಟ್‍ನ ಭಯಹುಟ್ಟಿಸುವ ಅನುಭವ ನೀಡುತ್ತದೆ.  ಇದು ಸವಾರರಿಗೆ ರೇಸಿಂಗ್ ಡ್ರೈವರ್‍ನಂತೆ ವೇಗೋತ್ಕರ್ಷ, ಮೇಲಕ್ಕೂ ಕೆಳಕ್ಕೂ ಹೋಗುವ ಇದ್ದಕ್ಕಿದ್ದಂತೆ ಮತ್ತೆ ದಿಕ್ಕು ಬದಲಾಗುವ ಥ್ರಿಲ್ಲಿಂಗ್ ಎಕ್ಸ್‍ಪಿರಿಯನ್ಸ್ ನೀಡುತ್ತದೆ.

ಪ್ಲೆಷರ್ ಬೀಚ್ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಇದು ನಿರ್ಮಾಣವಾಗಿದೆ. 21 ದಶಲಕ್ಷ ಡಾಲರ್ ವೆಚ್ಚದಲ್ಲಿ ತಲೆ ಎತ್ತಿರುವ ಐಕಾನ್ ರೈಡ್‍ನನ್ನು ಬ್ರಿಟನ್‍ನ ಪ್ರಥಮ ಡಬಲ್ ಲಾಂಚ್ ರೋಲರ್‍ಕೋಸ್ಟರ್ ಎಂದು ಬಣ್ಣಿಸಲಾಗಿದೆ. ಎರಡೂವರೆಗೆ ನಿಮಿಷಗಳ ಐಕಾನ್ ರೈಡ್ ಫಾರ್ಮುಲ ಒನ್ ರೇಸ್ ಕಾರ್ ವೇಗದ ಅನುಭವ ನೀಡುತ್ತದೆ. ಗಂಟೆಗೆ 80 ಕಿಲೋಮೀಟರ್ ವೇಗದ ಟ್ವಿಸ್ಟ್ ಅಂಡ್ ಟರ್ನ್, ಥ್ರಿಲ್ ಬಯಸುವವ ಸಾಹಸಿಗರ ಧೈರ್ಯ ಪರೀಕ್ಷಿಸುವ ರೋಲರ್‍ಕೋಸ್ಟರ್ ಇದು.

ds ds-1 ds-4

Facebook Comments

Sri Raghav

Admin