ತಂಬಾಕಿನಿಂದ ದೂರವಾಗಲು ಸ್ವರ್ಣ ಸಾಥಿ

ಈ ಸುದ್ದಿಯನ್ನು ಶೇರ್ ಮಾಡಿ

swarna-sathi-akshay
ನವದೆಹಲಿ, ಜೂ.6- ಬೆಸ್ಟೋ ಕೆಮ್ ಫಾರ್ಮುಲೇಷನ್ಸ್ (ಐ) ಲಿ.ನ ಭಾಗವಾಗಿರುವ ಬಿಗ್‍ಬ್ರದರ್ಸ್ ನ್ಯೂಟ್ರಾ ಕೇರ್ ಪ್ರೈ. ಲಿ. ಭಾರತದಲ್ಲಿ  ಹೆಲ್ತ್‍ಕೇರ್ ಸೆಲ್ಯೂಷನ್ ವಿಭಾಗದ ಸಂಸ್ಥೆಗಳಲ್ಲಿ ಅತ್ಯಂತ ಮುಂಚೂಣಿ ಯಲ್ಲಿದ್ದು, ಭಾರತದ ಮೊಟ್ಟ ಮೊದಲ ನ್ಯೂಟ್ರಾಸ್ಯುಟಿಕಲ್ ಉತ್ಪನ್ನ ಸ್ವರ್ಣ ಸಾಥಿ ಬಿಡುಗಡೆ ಮಾಡಿದ್ದು, ಕ್ಯಾನ್ಸರ್‍ಗೆ ಕಾರಣವಾಗುವ ತಂಬಾಕು ಮತ್ತು ಗುಟ್ಕಾಗಳಂತಹ ಪದಾರ್ಥಗಳಿಂದ ದೂರವಾಗಲು ನೆರವಾಗಲಿದೆ.

ಸಂಪೂರ್ಣವಾಗಿ ನೈಸರ್ಗಿಕ ಅಂಶಗಳಿಂದ ಈ ಪದಾರ್ಥವನ್ನು ಮಾಡಲಾಗಿದ್ದು, ತಂಬಾಕು ವ್ಯಸನದಿಂದ ದೂರವಾಗಲು ಪ್ರಯತ್ನಿಸುತ್ತಿರುವ ಬಹುತೇಕ ಜನರಿಗೆ ಮತ್ತು ಪ್ರಮುಖವಾಗಿ ಯುವ ಪೀಳಿಗೆಯವರಿಗೆ ಪ್ರಯೋಜನಕಾರಿಯಾಗಿದೆ. ಜತೆಗೆ ಗುಟ್ಕಾ, ತಂಬಾಕು ಮತ್ತು ಸಿಗರೇಟು ವ್ಯಸನದಿಂದ ಎದುರಾಗಿರುವ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಕೂಡ ಸ್ವರ್ಣಸಾಥಿ ನೆರವಾಗಲಿದೆ.

ಬಿಗ್‍ಬ್ರದರ್ಸ್ ನ್ಯೂಟ್ರಾ ಕೇರ್ ಪ್ರೈ. ಲಿ.ನ ಸಿಇಒ ಗ್ರೀಶ್ ಕುಮಾರ್ ಜುನೇಜಾ ಮಾತನಾಡಿ, ಆರೋಗ್ಯಕರ ಉತ್ಪನ್ನದ ಮೂಲಕ ಬಹುಕೋಟಿ ಜನತೆಯ ಆರೋಗ್ಯವರ್ಧನೆ ಮಾಡುವ ಉದ್ದೇಶದಿಂದ ಅತ್ಯಂತ ವಿಶೇಷವಾದ ನ್ಯೂಟ್ರಾಸ್ಯೂಟಿಕಲ್ ಉತ್ಪನ್ನವನ್ನು ವಿಶ್ವ ತಂಬಾಕು ವಿರೋಧ ದಿನದ ವಾರದಲ್ಲೇ ಬಿಡುಗಡೆ ಮಾಡಿರುವುದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ. ನೂತನ ಉತ್ಪನ್ನ ಬಿಡುಗಡೆ ಸಮಾರಂಭದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದರು.

Facebook Comments

Sri Raghav

Admin