ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ಮುಂದಾದ ರಾಜಸ್ಥಾನ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Rajastan

ಜೈಪುರ,ಜೂ.8- ಗೋ ಸಂರಕ್ಷಣೆಗಾಗಿ ಮುದ್ರಾಂಕ ಶುಲ್ಕದ ಮೇಲೆ ಸರ್ಚಾರ್ಜ್ ವಿಧಿಸಿದ್ದ ರಾಜಸ್ಥಾನ ಸರ್ಕಾರ ಇದೀಗ ಮದ್ಯದ ಮೇಲೂ ಗೋ ತೆರಿಗೆ ವಿಧಿಸಲು ಚಿಂತನೆ ನಡೆಸಿದೆ. ಈ ಪ್ರಸ್ತಾವನೆ ಸದ್ಯಕ್ಕೆ ಯೋಜನೆ ಹಂತದಲ್ಲಿದ್ದು, ಸರ್ಕಾರ ಇನ್ನೂ ಸುಂಕದ ದರವನ್ನು ನಿರ್ಧರಿಸಬೇಕಿದೆ. ಇದರ ಜತೆಗೆ ಮುದ್ರಾಂಕ ಶುಲ್ಕ ಮೇಲಿನ ಸರ್ಚಾರ್ಜ್‍ನ್ನು ಶೇ.10ರಿಂದ 20ಕ್ಕೆ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಮದ್ಯದ ಮೇಲೂ ಗೋ ತೆರಿಗೆ ವಿಧಿಸಿ ಹೆಚ್ಚಿನ ಹಣ ಸಂಗ್ರಹಿಸಿ, ಇದರಿಂದ ಬರುವ ಹಣವನ್ನು ಗೋ ಅಭಿವೃದ್ದಿಗೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ವರ್ಷದ ಏಪ್ರಿಲ್‍ನಲ್ಲಿ ಮುಖ್ಯಮಂತ್ರಿ ವಸುಂಧರ ರಾಜೇ, ಗೋ ಅಭಿವೃದ್ಧಿ ಕಾರ್ಯಕ್ಕೆ ಹಣ ಕ್ರೋಢೀಕರಿಸಲು ಎಲ್ಲ ಮುದ್ರಾಂಕ ಶುಲ್ಕದ ಮೇಲೆ ಶೇ.10ರಷ್ಟು ಸಜರ್Áಜ್ ವಿಧಿಸಿದ್ದರು. ಬಾಡಿಗೆ ಒಪ್ಪಂದ, ಲೀಸ್ ಒಪ್ಪಂದಗಳಿಗೆ ಅಧಿಕ ಶುಲ್ಕ ವಿಧಿಸಲಾಗುತ್ತಿತ್ತು. ಈ ಸುಂಕ ವಿಧಿಕೆಯಿಂದ 235 ಕೋಟಿ ರೂ.ಸರ್ಕಾರ ಸಂಗ್ರಹಿಸಿತ್ತು.

Facebook Comments

Sri Raghav

Admin