ಅನಂತಕುಮಾರ್ ಹೆಗಡೆಗೆ ಮೋದಿ ಲಗಾಮು ಹಾಕಬೇಕು : ಎಸ್.ಆರ್.ಶ್ರೀನಿವಾಸ್

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar-Hegde
ತುಮಕೂರು,ಜೂ.8-ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಸಹೋದ್ಯೋಗಿ ಅನಂತಕುಮಾರ್ ಹೆಗಡೆಗೆ ಲಗಾಮು ಹಾಕಬೇಕು ಎಂದು ನೂತನ ಸಚಿವ ಎಸ್.ಆರ್.ಶ್ರೀನಿವಾಸ್ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.ಆಗ್ನೇಯ ಶಿಕ್ಷಕರ, ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಬಂದ ಶಿಕ್ಷಕರನ್ನು ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಪರ ಮತಯಾಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನೂ ಸಚಿವನಾಗುತ್ತೇನೆಂದು ನಿರೀಕ್ಷೆಯನ್ನೇ ಮಾಡಿರಲಿಲ್ಲ. ಅಂದು ಸಚಿವ ಸಂಪುಟ ವಿಸ್ತರಣೆ ದಿನ ಕುಮಾರಸ್ವಾಮಿ ಅವರಿಂದ 5-6 ಬಾರಿ ಫೋನ್ ಬಂದಿತ್ತು. ಹೊರ ಹೋಗಿದ್ದವನು ಬಂದು ನೋಡಿದಾಗ ತಿಳಿಯಿತು. ಆಗ ಮತ್ತೆ ನಾನು ಫೋನ್ ಮಾಡಿದಾಗ ರಾಜಭವನಕ್ಕೆ ಬರುವಂತೆ ಆಹ್ವಾನಿಸಿದರು. ಆಗ ಆಶ್ಚರ್ಯಚಕಿತನಾದೆ ಎಂದರು.

ಈ ಬಾರಿ ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಈ ಸ್ಥಾನಕ್ಕಾಗಿ ಲಾಬಿ ಮಾಡದೆ ಯಾವುದೇ ಖಾತೆ ಸಿಕ್ಕರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಜಿಲ್ಲೆಯಲ್ಲಿ ಪರಮೇಶ್ವರ್, ವೆಂಕಟರಮಣ ಮತ್ತು ನಾವು ಸೇರಿದಂತೆ ಒಟ್ಟು ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ರಾಜ್ಯದಲ್ಲೇ ತುಮಕೂರನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇವೆ ಎಂದರು. ಪದೇ ಪದೇ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಆಂತರಿಕ ಗೊಂದಲದ ಲಾಭ ಪಡೆಯಲು ಬಿಜೆಪಿಯವರು ಮುಂದಾಗಿದ್ದಾರೆ. ಅವರ ನಿರೀಕ್ಷೆ ಫಲ ನೀಡುವುದಿಲ್ಲ. ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.

Facebook Comments

Sri Raghav

Admin