ಯಾರಿಗೆ ಯಾವ ಖಾತೆ ಸಿಕ್ಕಿದೆ, ಇಲ್ಲಿದೆ ನೋಡಿ ಅಧಿಕೃತ ಪಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Minister-1

ಬೆಂಗಳೂರು. ಜೂ. 08 : ಒಂದೆಡೆ ಸಚಿವ ಸ್ಥಾನ ಸಿಗದೆ ಕಾಂಗ್ರೆಸ್ ನಲ್ಲಿ ಶಾಸಕರು ಬಂಡಾಯ ಸಾರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಾಕಷ್ಟು ಆಳೆದು ತೂಗಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಬುಧವಾರ ಕಾಂಗ್ರೆಸ್ – ಜೆಡಿಎಸ್ ವತಿಯಿಂದ 25 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.  ಆದರೆ, ಕಾಂಗ್ರೆಸ್ ನಲ್ಲಿ ಉಂಟಾದ ದಿಢೀರ್ ಬೆಳವಣಿಗೆ ದೋಸ್ತಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಷಮಿಸಿದ್ದರಿಂದ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಯಿತು. ಶುಕ್ರವಾರ ಮಧ್ಯಾಹ್ನ ಕುಮಾರಸ್ವಾಮಿ ಅವರು ಖಾತೆಗಳನ್ನು ಸಚಿವರಿಗೆ ಹಂಚಿಕೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಡಿದ್ದರು. ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಕೇವಲ ಲೋಕೋಪಯೋಗಿ ಖಾತೆಯನ್ನು ನೀಡಲಾಗಿದೆ. ಇಂಧನ ಖಾತೆ ತಮಗೆ ನೀಡಬೇಕೆಂದು ಈ ಮೊದಲು ಬೇಡಿಕೆ ಇಟ್ಡಿದ್ದರಾದರೂ ಶಾಸಕರ ಒತ್ತಡಕ್ಕೆ ಮಣಿದು ಒಂದೇ ಖಾತೆಗೆ ಸೀಮಿತಗೊಳಿಸಲಾಗಿದೆ.

ಇನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ನಿರೀಕ್ಷೆಯಂತೆ ಗೃಹ ಖಾತೆಯ ಜೊತೆಗೆ ಬೆಂಗಳೂರು ನಗರಾಭಿವೃದ್ಧಿಯನ್ನು ನೀಡಲಾಗಿದೆ. ಈ ಖಾತೆಯನ್ನು ತಮ್ಮ ಆಪ್ತ ಕೆ.ಜೆ.ಜಾಜ್9 ಅವರಿಗೆ ನೀಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೇಡಿಕೆಗೆ ಕುಮಾರಸ್ವಾಮಿ ಸೊಪ್ಪು ಹಾಕಿಲ್ಲ‌
ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಗೆ ಇಂಧನ ಖಾತೆಯನ್ನು ನೀಡಿಲ್ಲ. ಈ ಹಿಂದೆ ಹಂಚಿಕೆಯಾದಂತೆ ಇಂಧನ ಖಾತೆ ಜೆಡಿಎಸ್ ನಲ್ಲೇ ಉಳಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಪ್ರಬಲ ಖಾತೆಯನ್ನು ಬಿಟ್ಡುಕೊಟ್ಟರೆ ಮಾತ್ರ ಶಿವಕುಮಾರ್ ಗೆ ದಕ್ಕಲಿದೆ.ಅಲ್ಲಿಯವರೆಗೆ ಇದು ಮುಖ್ಯಮಂತ್ರಿ ಬಳಿಯೇ ಇರಲಿದೆ ಎಂದು ತಿಳಿದು ಬಂದಿದೆ.ಸಾರಿಗೆ ಖಾತೆ ಮೇಲೆ ಕಣ್ಣಿಟ್ಟಿದ್ದ ಪುಟ್ಟರಾಜುಗೂ ನಿರಾಸೆಯಾಗಿದೆ. ಈ ಖಾತೆಯೂ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರ ಸಂಬಂಧಿಕರಾದ ಡಿ.ಸಿ. ತಮ್ಮಣ್ಣಗೆ ಒಲಿದಿದೆ.  ಯಾರಿಗೆ ಯಾವ ಖಾತೆ ಸಿಕ್ಕೆದೆ ಎಂಬ ಸಂಪೂರ್ಣ ವಿವರ ಈ ಕೆಳಕಂಡತಿಂದೆ.

ಸಿಎಂ, ಡಿಸಿಎಂ ಹಾಗೂ 25 ಸಚಿವರುಗಳಿಗೆ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಪ್ರಕಟ
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಹಣಕಾಸು, ಅಬಕಾರಿ, ಗುಪ್ತಚರ ಇಲಾಖೆ
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಇಂಧನ, ಸಾರ್ವಜನಿಕ ಉದ್ದಿಮೆ ಖಾತೆ
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಜವಳಿ ಖಾತೆ, ಕ್ಯಾಬಿನೆಟ್ ವ್ಯವಹಾರಗಳು
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ವಾರ್ತೆ, ಯೋಜನೆ ಮತ್ತು ಸಾಂಖ್ಯಿಕ
ಮುಖ್ಯಮಂತ್ರಿ H.D.ಕುಮಾರಸ್ವಾಮಿ – ಮೂಲ ಸೌಕರ್ಯಖಾತೆ, ಡಿಪಿಎಆರ್
ರಮೇಶ್ ಜಾರಕಿಹೊಳಿ – ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ ಖಾತೆ
ಯು.ಟಿ.ಖಾದರ್ – ನಗರಾಭಿವೃದ್ಧಿ ಹಾಗೂ ವಸತಿ ಖಾೈತೆ
ಸಾ.ರಾ.ಮಹೇಶ್ – ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ
ಜಮೀರ್ ಅಹ್ಮದ್ – ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ
ಎನ್.ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
ವೆಂಕಟರಾವ್ ನಾಡಗೌಡ – ಪಶುಸಂಗೋಪನಾ ಮತ್ತು ಮೀನುಗಾರಿಕೆ
ಶಿವಾನಂದ್ ಪಾಟೀಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ವೆಂಕಟರಮಣಪ್ಪ – ಕಾರ್ಮಿಕ
ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ
ಸಿ.ಎಸ್.ಪುಟ್ಟರಾಜು – ಸಣ್ಣ ನೀರಾವರಿ ಖಾತೆ
ಡಾ.ಜಿ.ಪರಮೇಶ್ವರ್ – ಗೃಹ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ
ಡಾ.ಜಿ.ಪರಮೇಶ್ವರ್ – ಯುವ ಸಬಲೀಕರಣ ಹಾಗೂ ಕ್ರೀಡಾ ಖಾತೆ
ಎಚ್.ಡಿ.ರೇವಣ್ಣ – ಲೋಕೋಪಯೋಗಿ
ಡಿ.ಕೆ.ಶಿವಕುಮಾರ್ – ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ
ಆರ್.ವಿ.ದೇಶಪಾಂಡೆ – ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ
ಬಂಡೆಪ್ಪ ಕಾಶೆಂಪೂರ್ – ಸಹಕಾರ
ಕೆ.ಜೆ.ಜಾರ್ಜ್ – ಬೃಹತ್ ಕೈಗಾರಿಕೆ ಹಾಗೂ ಐಟಿ ಮತ್ತು ಬಿಟಿ ಖಾತೆ
ಎನ್.ಎಚ್.ಶಿವಶಂಕರ್ ರೆಡ್ಡಿ – ಕೃಷಿ
ಡಿ.ಸಿ.ತಮ್ಮಣ್ಣ – ಸಾರಿಗೆ
ಕೃಷ್ಣ ಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಕೃಷ್ಣ ಬೈರೇಗೌಡ – ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ
ಎಂ.ಸಿ.ಮನಗೂಳಿ – ತೋಟಗಾರಿಕೆ ಇಲಾಖೆ
ಜಿ.ಟಿ.ದೇವೇಗೌಡ – ಉನ್ನತ ಶಿಕ್ಷಣ
ಎಸ್.ಆರ್.ಶ್ರೀನಿವಾಸ್ – ಸಣ್ಣ ಕೈಗಾರಿಕೆ ಇಲಾಖೆ
ಜಯಮಾಲಾ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ
ಆರ್.ಶಂಕರ್ – ಅರಣ್ಯ ಮತ್ತು ಪರಿಸರ ಮತ್ತು ಜೀವವೈವಿಧ್ಯ ಇಲಾಖೆ
ಸಿ.ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

Ministers--01

Ministers--02

Ministers--03

 

Ministers--04

Facebook Comments

Sri Raghav

Admin