ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿದ್ದ ಕೊಹ್ಲಿ ಪ್ರತಿಮೆ ಭಗ್ನ..!

ಈ ಸುದ್ದಿಯನ್ನು ಶೇರ್ ಮಾಡಿ

virat-kohli

ಮುಂಬೈ, ಜೂ.8- ಪ್ರತಿಷ್ಠಿತ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಸ್ಥಾಪಿಸಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಮೇಣದ ಪತ್ರಿಮೆಯು ಭಗ್ನವಾಗಿದೆ. ವಿರಾಟ್ ಅಭಿಮಾನಿಗಳು ವಿರಾಟ್ ಕೊಹ್ಲಿಯ ಮೇಣದ ಪತ್ರಿಮೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಮೂರ್ತಿಯ ಎಡಕಿವಿಯ ಭಾಗ ಭಗ್ನಗೊಂಡಿದ್ದರಿಂದ ನಿನ್ನೆ ಪ್ರತಿಮೆಯನ್ನು ತೆರವುಗೊಳಿಸ ಲಾಗಿತ್ತಾದರೂ ಇಂದು ಮತ್ತೆ ಪ್ರತಿಷ್ಠಾಪಿಸಲಾಗಿದೆ.

ಟುಸ್ಸಾಡ್ಸ್‌ ಮ್ಯೂಸಿಯಂನ ಭಾರತದ ಘಟಕದಲ್ಲಿ ಅನಾವರಣಗೊಂಡ ಕ್ರೀಡಾಪಟುವಿನ 4ನೇ ಮೇಣದ ಪ್ರತಿಮೆ ಇದಾಗಿದೆ. 1983ರ ಐಸಿಸಿ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌, ಅರ್ಜೆಂಟೀನಾದ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಮತ್ತು ಜಮೈಕಾದ ಶರವೇಗದ ಸರದಾರ ಉಸೇನ್‌ ಬೋಲ್ಟ್‌ ಅವರ ಮೇಣದ ಪ್ರತಿಮೆಗಳನ್ನು ಈ ಮ್ಯೂಸಿಯಂ ಹೊಂದಿದೆ. ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆ ನಿರ್ಮಿಸಲು ಲಂಡನ್‌ನಿಂದ ಆಗಮಿಸಿದ್ದ ಕಲಾವಿದರು, ಕೊಹ್ಲಿ ಅವರ ದೇಹದ 200 ಅಳತೆಗಳನ್ನು ಮತ್ತು ಫೋಟೊಗಳನ್ನು ಸಂಗ್ರಹಿಸಿದ್ದರು.

Facebook Comments

Sri Raghav

Admin