ರಾಷ್ಟ್ರಪತಿ ಭವನದ ಸೇವಕನ ನಿಗೂಢ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Rashtrapati-bHavan

ನವದೆಹಲಿ, ಜೂ.8- ರಾಷ್ಟ್ರಪತಿ ಭವನದ ಸೇವಕರ ವಸತಿ ಸಮುಚ್ಛಯದಲ್ಲಿ ನೌಕರನೊಬ್ಬ ನಿಗೂಢವಾಗಿ ಮೃತಪಟ್ಟಿದ್ದಾನೆ. ರಾಷ್ಟ್ರಪತಿ ಭವನದಲ್ಲಿ 4ನೆ ದರ್ಜೆ ನೌಕರನಾಗಿರುವ ವ್ಯಕ್ತಿಯೊಬ್ಬ ವಸತಿ ಸಮುಚ್ಛಯದ ತನ್ನ ಮನೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನೌಕರ ತನ್ನ ನಿವಾಸದಲ್ಲಿ ಮನೆ ಬಾಗಿಲು ಹಾಕಿಕೊಂಡು ಮೃತಪಟ್ಟಿದ್ದಾನೆ.

ಆತನ ಕುಟುಂಬ ವರ್ಗದವರು ಹೊರಹೋಗಿರುವ ಹಿನ್ನೆಲೆಯಲ್ಲಿ ನೌಕರನ ಸಾವಿನ ಬಗ್ಗೆ ಮಾಹಿತಿ ದೊರೆತಿರಲಿಲ್ಲ. ಆದರೆ, ಮನೆಯಿಂದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ನೌಕರ ಮನೆಗೆ ಒಳಗಿನಿಂದ ಚಿಲಕ ಹಾಕಿಕೊಂಡು ಮೃತಪಟ್ಟಿರುವುದರಿಂದ ಅನಾರೋಗ್ಯದಿಂದ ಆತ ಸಾವಿಗೀಡಾಗಿರಬಹುದು ಎಂದು ಶಂಕಿಸಿದ್ದಾರೆ. ನೌಕರ ಮೂರ್ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

 

Facebook Comments

Sri Raghav

Admin