‘ನನಗೆ ನಿಮ್ಮ ಸಲಹೆ ಬೇಕಿಲ್ಲ, ಮಂತ್ರಿ ಪದವಿ ಬೇಕು’

ಈ ಸುದ್ದಿಯನ್ನು ಶೇರ್ ಮಾಡಿ

MB-Patil-Congress

ಬೆಂಗಳೂರು, ಜೂ.8-ನನಗೆ ನಿಮ್ಮ ಯಾವುದೇ ಸಲಹೆ ಬೇಕಿಲ್ಲ. ಮಂತ್ರಿ ಪದವಿ ಬೇಕು ಅಷ್ಟೇ ಎಂದು ಎಂ.ಬಿ.ಪಾಟೀಲ್ ಸಂಧಾನಕ್ಕೆ ಬಂದವರಿಗೆ ಖಡಕ್ಕಾಗಿ ಹೇಳಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಎಂ.ಬಿ.ಪಾಟೀಲ್ ಅವರ ಮನವೊಲಿಕೆ ಇಂದು ಅವರ ನಿವಾಸಕ್ಕೆ ತೆರಳಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಅವರ ವಿರುದ್ದ ಹರಿಹಾಯ್ದ ಎಂ.ಬಿ.ಪಾಟೀಲ್ ಅವರು ಚುನಾವಣೆಗೆ ಫಂಡ್ ಬೇಕಾದಾಗ ಎಂ.ಬಿ.ಪಾಟೀಲ್ ಬೇಕು, ಈಗ ನನ್ನ ನೆನಪಿಲ್ಲವೇ? ನಿನ್ನ ಸಲಹೆಗಳ ಅಗತ್ಯ ನನಗಿಲ್ಲ. ನಾನು ಸಚಿವನಾಗಬೇಕು ಅಷ್ಟೇ. ನಿಮ್ಮ ಯಾವ ಮಾತನ್ನೂ ಕೇಳುವ ವ್ಯವಧಾನ ನನಗಿಲ್ಲ ಎಂದು ಹೇಳಿದ್ದಾರೆ.

ಪರಮೇಶ್ವರ್, ಆರ್.ವಿ.ದೇಶಪಾಂಡೆ ಅವರು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಎಲ್ಲರ ವಿರುದ್ಧವೂ ಹರಿಹಾಯ್ದಿದ್ದಾರೆ. ನಾನು ಮಾಡಿದ ತಪ್ಪಾದರೂ ಏನು, ನನ್ನನ್ನು ಸಂಪುಟದಿಂದ ಹೊರಗಿಟ್ಟ ಕಾರಣವೇನು? ಕಾಂಗ್ರೆಸ್ ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೆ? ನಾನು ನನ್ನ ಮತದಾರರಿಗೆ, ಕ್ಷೇತ್ರದ ಜನರಿಗೆ ಏನು ಹೇಳಲಿ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಎಂ.ಬಿ.ಪಾಟೀಲ್ ಅವರ ಈ ವರ್ತನೆಗೆ ಸಂಧಾನಕ್ಕೆ ಬಂದವರು ಕಂಗಾಲಾಗಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನಕ್ಕೆ ಅವಕಾಶ ಮಾಡಿಕೊಡಿ ಅಷ್ಟೇ. ಬೇರೆ ಏನನ್ನೂ ಕೇಳುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದರಿಂದ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮನವೊಲಿಕೆಗೆ ಬಂದ ನಾಯಕರು ವಾಪಸ್ ಹಿಂತಿರುಗಿದ್ದಾರೆ.

Facebook Comments

Sri Raghav

Admin