ಡಾಲರ್ ಎದುರು ರೂಪಾಯಿ ಮೌಲ್ಯ 42 ಪೈಸೆ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

Doller-020

ಮುಂಬೈ, ಜೂ.8- ಕಳೆದ ಒಂದು ತಿಂಗಳಿನಿಂದಲೂ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಹಾವು ಏಣಿ ಆಟದಲ್ಲಿ ತೊಡಗಿದ್ದು ಇಂದು 42 ಪೈಸೆಯಷ್ಟು ಕುಸಿತಗೊಂಡಿದೆ. ದೇಶೀಯ ಷೇರು ಮಾರುಕಟ್ಟೆ ಯಲ್ಲೂ ಕೂಡ ವಿದೇಶಿ ವಿನಿಮಯ ಡೀಲರ್‍ಗಳು ಹೆಚ್ಚಾಗಿರುವುದರಿಂದ ಡಾಲರ್‍ಗಳಿಗೆ ಹೆಚ್ಚು ಬೇಡಿಕೆ ಬಂದಿದ್ದು, ಶರವೇಗದಲ್ಲಿ ವಹಿವಾಟು ನಡೆಸುತ್ತಿರುವ ಡಾಲರ್‍ನ ವಹಿವಾಟಿನ ವಿರುದ್ಧದ ಲಾಭ, ಹೆಚ್ಚಳದಿಂದ ರೂಪಾಯಿಗಳ ಮೇಲೆ ಒತ್ತಡ ಹೆಚ್ಚಿದೆ. ನಿನ್ನೆ ದೇಶೀಯ ಘಟಕವು 20 ಪೈಸೆಯಷ್ಟು ಕುಸಿತ ಕಂಡು 67.12 ರೂಪಾಯಿಗಳಿಗೆ ಇಳಿದಿತ್ತು, ಆದರೆ ಇಂದು ವಹಿವಾಟು ಆರಂಭಗೊಂಡ ತಕ್ಷಣವೇ ಮತ್ತೆ ರೂಪಾಯಿ ಮೌಲ್ಯ 22 ಪೈಸೆಯಷ್ಟು ಕುಸಿದಿದೆ. ದೇಶದಲ್ಲಿ ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವನ್ನು ಕಳೆದು ಕೊಳ್ಳುತ್ತಿರುವುದರಿಂದ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

Facebook Comments