ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಬಜೆಟ್

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--001

ಬೆಂಗಳೂರು, ಜೂ.9- ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜೆ.ಪಿ.ನ ಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ಮಾಡುವುದಕ್ಕಿಂತ ಜನರ ಸಮಸ್ಯೆ ಬಗೆಹರಿಸಲು ರೂಪುರೇಷೆ ಸಿದ್ಧಪಡಿಸುತ್ತಿರುವುದಾಗಿ ಹೇಳಿದ ಅವರು,ರಾಜಕೀಯ ಮಾಡಲು ಬೇರೆಯವರಿದ್ದಾರೆ ಎಂದು ಹೇಳಿದರು.ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಐದು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರುತ್ತದೆ. ಹೀಗಿರುವ ಕೆಲವೊಂದು ಸಮಸ್ಯೆಗಳು ಇನ್ನೊಂದು ವಾರದಲ್ಲಿ ಬಗೆಹರಿಯಲಿದೆ. ತಾವು ಏಕಾಂಗಿಯಾಗಲು ಸಾಧ್ಯವಿಲ್ಲ ಎಂದ ಅವರು, ಸರ್ಕಾರ ಬೀಳುತ್ತೆ ಎಂದು ಹಗಲುಗನಸು ಕಾಣುವವರು ಕಾಣುತ್ತೀರಲಿ ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡುವುದಿಲ್ಲ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂದಾದರೂ ರೈತ ಸಾಲ ಮನ್ನಾ ಮಾಡಿದ್ದರೆ ಎಂದು ಪ್ರಶ್ನಿಸಿದರು. ಸಾಲ ಮಾಡುವ ವಿಚಾರದಲ್ಲಿ ಏನು ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಅಂಥವರಿಂದ ಪಾಠ ಕಲಿಯಬೇಕಿಲ್ಲ. ರೈತರ ಸಾಲ ಮನ್ನಾ ಮಾಡುವುದಷ್ಟೇ ಅಲ್ಲ, ಮತ್ತೆ ಸಾಲಗಾರರಾಗದಂತೆ ಕ್ರಮಕೈಗೊಳ್ಳಲಾಗುವುದು. ನಿನ್ನೆ ಇಸ್ರೇಲ್ ಪರಿಣಿತರ ತಂಡದ ಜೊತೆ ಸಭೆ ನಡೆಸಲಾಗಿದೆ ಎಂದರು.ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರಿಗೆ ಅಥಣಿ ಕ್ಷೇತ್ರದ ಜನರೇ ಶಾಪ ಹಾಕಿ ಕೂರಿಸಿದ್ದಾರೆ. ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಅವರು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನಹರಿಸಲಿ. 10-15 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಸಚಿವರಲ್ಲಿ ಅಸಮಾಧಾನವಿಲ್ಲ:
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಯಾರೂ ಕೂಡ ಅಸಮಾಧಾನಗೊಂಡಿಲ್ಲ. ತಮ್ಮ ಬಳಿ ಯಾರೂ ಕೂಡ ಅಸಮಾಧಾನವನ್ನು ತೋಡಿಕೊಂಡಿಲ್ಲ. ಅಲ್ಲದೆ, ಇಂತಹ ಖಾತೆಯೇ ಬೇಕು ಎಂದು ಯಾರೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.ಸಚಿವರಾಗಿ ಸೇವೆ ಸಲ್ಲಿಸಲು ಉನ್ನತ ಶಿಕ್ಷಣ, ನೀರಾವರಿಗಿಂತ ಉತ್ತಮ ಖಾತೆಗಳು ಬೇಕೇ? ಹಣಕಾಸು ಖಾತೆ ಬೇಕೆ? ಇಂತಹ ಖಾತೆ ಬೇಕೆಂದು ಅಸಮಾಧಾನಗೊಂಡವರು ಕೇಳಬೇಕಲ್ಲವೇ?ಮಂತ್ರಿಯಾಗಿ ಸಮರ್ಥವಾಗಿ ಕೆಲಸ ಮಾಡಬೇಕು ಎಂದರು. ಮೊದಲು ಮಂತ್ರಿ ಸ್ಥಾನ ಕೇಳುತ್ತಾರೆ, ಆನಂತರ ವಿಧಾನಸೌಧದಲ್ಲಿ ಮೂರನೇ ಮಹಡಿಯ ಕಚೇರಿ ಕೇಳುತ್ತಾರೆ. ಆನಂತರ

Facebook Comments

Sri Raghav

Admin