ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಜೀವ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Paranna--021

ಬೆಂಗಳೂರು, ಜೂ.10- ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಒಂದು ಕೋಟಿ ಹಣ ನೀಡುವಂತೆ, ಇಲ್ಲದಿದ್ದರೆ ಪ್ರಾಣಕ್ಕೆ ಕುತ್ತು ತರುವುದಾಗಿ ಕೋಬ್ರಾ ಟೀಂ ಎಂಬ ಹೆಸರಿನಿಂದ ಅನಾಮಧೇಯನೊಬ್ಬ ಕರೆ ಮಾಡಿ ಬೆದರಿಸಿದ್ದಾನೆ. ಈ ಸಂಬಂಧ ಶಾಸಕರು ಗಂಗಾವತಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ 1 ಕೋಟಿಗೆ ಬೇಡಿಕೆ ಇಟ್ಟು ಕರೆ ಮಾಡುತ್ತಿದ್ದ ಅನಾಮಧೇಯರು ನಿನ್ನೆ ಅವರ ಮನೆಗೆ ಮದ್ಯದ ಬಾಕ್ಸ್  ನಲ್ಲಿ ಕವರ್‍ವೊಂದನ್ನು ಕಳುಹಿಸಿದ್ದಾರೆ. ಕವರ್‍ನಲ್ಲಿ ನೀವು 50 ಲಕ್ಷವನ್ನಾದರೂ ನೀಡಬೇಕು ಎಂದು ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂದು ಶಾಸಕರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಗಂಗಾವತಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಾಸಕರಿಗೆ ನೇರವಾಗಿ ಫೋನ್ ಮಾಡಿ ಬೆದರಿಕೆ ಹಾಕಿರುವ ಹಾಗೂ ಕವರ್‍ನಲ್ಲಿ ಬೆದರಿಕೆ ಸಂದೇಶ ಕಳುಹಿಸಿರುವ ಅನಾಮಧೇಯ ವ್ಯಕ್ತಿಯ ಬಗ್ಗೆ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ.

 

Facebook Comments

Sri Raghav

Admin