ದೇವರನ್ನು ಒಲಿಸಿಕೊಳ್ಳಲು ಮಗಳನ್ನೇ ಬಲಿ ಕೊಟ್ಟ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

Nabab--01
ಜೋಧ್‍ಪುರ್ (ರಾಜಸ್ತಾನ), ಜೂ.10- ರಂಜಾನ್ ಮಾಸದಲ್ಲಿ ದೇವರನ್ನು ಒಲಿಸಲು ಮಗಳನ್ನೇ ಬಲಿ ಕೊಟ್ಟ ತಂದೆಯನ್ನು ಬಂಧಿಸಲಾಗಿದೆ. ನವಾಬ್ ಅಲಿ ಬಂಧಿತ ಆರೋಪಿ. ಈತನ ಹಿರಿಯ ಮಗಳು ರಿಜ್ವಾನಾ (4) ಹತ್ಯೆಗೀಡಾದ ಬಾಲಕಿ. ರಾಜಸ್ತಾನದ ಜೋಧ್ಪುರ್‍ನ ನವಾಬ್ ಮನೆಯಲ್ಲಿ ಆಕೆಯ ಮೃತದೇಹ ಶುಕ್ರವಾರ ಪತ್ತೆಯಾಗಿತ್ತು. ಕತ್ತು ಸೀಳಿ ರಿಜ್ವಾನಾಳನ್ನು ಹತ್ಯೆ ಮಾಡಲಾಗಿತ್ತು ಎಂದು ಜೋಧ್‍ಪುರ್ ಪೊಲೀಸ್ ವರಿಷ್ಠಾಧಿಕಾರಿ ರಾಜನ್ ದುಷ್ಯಂತ್ ತಿಳಿಸಿದ್ದಾರೆ.

ಗುರುವಾರ ರಾತ್ರಿ ನವಾಬ್, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ತಾರಸಿಯಲ್ಲಿ ಮಲಗಿದ್ದರು. ಬೆಳಗ್ಗೆ ರಿಜ್ವಾನಾ ನಾಪತ್ತೆಯಾಗಿದ್ದಳು. ಮನೆಯ ಕೆಳ ಅಂತಸ್ತಿನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಯಿತು. ಬೆಕ್ಕು ತನ್ನ ಮಗಳ ಕುತ್ತಿಗೆ ಕಚ್ಚಿ ಕೊಂದಿದೆ ಎಂದು ಎಲ್ಲರನ್ನೂ ನಂಬಿಸಲು ನವಾಬ್ ಯತ್ನಿಸಿದ್ದ.  ಪೊಲೀಸರು ವಿಚಾರಣೆ ನಡೆಸಿದಾಗ ದೇವರನ್ನು ಒಲಿಸಿಕೊಳ್ಳಲು ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಚಾಕುವಿನಿಂದ ಕತ್ತು ಸೀಳಿ ಕೊಂದಿರುವುದಾಗಿ ನವಾಬ್ ಬಾಯಿಬಿಟ್ಟ.

Facebook Comments

Sri Raghav

Admin