ದೆಹಲಿಯವರೆಗೆ ಹೋಗಿಬಂದು ಸದ್ಯ ತಣ್ಣಗಾದ ರೆಬಲ್ ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

Patil--01

ಬೆಂಗಳೂರು, ಜೂ.10-ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಬಂಡಾಯದ ಬಾವುಟ ಹಾರಿಸಿ ದೆಹಲಿಯವರೆಗೆ ಹೋಗಿದ್ದ ಮಾಜಿ ಸಚಿವ, ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಸದ್ಯ ತಣ್ಣಗಾಗಿದ್ದಾರೆ.  ಉಪಮುಖ್ಯಮಂತ್ರಿಯಾಗಲಿ, ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ, ಸಚಿವ ಸ್ಥಾನವಾಗಲಿ ಯಾವುದೇ ಹುದ್ದೆ ಕೇಳಿಲ್ಲ. ಮಾಧ್ಯಮಗಳಷ್ಟೇ ಇದನ್ನು ವೈಭವೀಕರಿಸಿವೆ ಎಂದು ಹೈಕಮಾಂಡ್ ಭೇಟಿ ನಂತರ ಎಂ.ಬಿ.ಪಾಟೀಲ್ ತಿಳಿಸುವ ಮೂಲಕ ಕೂಲ್ ಆಗಿರುವುದನ್ನು ವ್ಯಕ್ತಪಡಿಸಿದ್ದಾರೆ.

ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಾನೇನು ಮಾಡಿದೆ. ನೀರಾವರಿ ಸಚಿವನಾಗಿ ನನ್ನ ಸಾಧನೆಯೇನು ಎಂಬ ಇತ್ಯಾದಿ ವಿಷಯಗಳ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರ ಜೊತೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಿದ್ದೇನೆ.ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಯಾವುದೇ ಹುದ್ದೆಯನ್ನು ಕೊಡಿ ಎಂದು ನಾನು ಕೇಳಿಲ್ಲ. ಆದರೆ ಆ ಹುದ್ದೆ ಬೇಕು, ಈ ಹುದ್ದೆ ಬೇಕು ಎಂದು ಪಾಟೀಲ್ ಕೇಳಿದರು ಎಂದು ಮಾಧ್ಯಮಗಳಲ್ಲಿ ತೋರಿಸುತ್ತಿದ್ದುದು ನನಗೆ ಬೇಸರ ತರಿಸಿತು ಎಂದು ಹೇಳಿದರು.ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ. ದೊಡ್ಡ ಹುದ್ದೆ ನನಗೇಕೆ ಬೇಕು? ಪಕ್ಷ ನನ್ನನ್ನು ಶಾಸಕನನ್ನಾಗಿ ಮಾಡಿದೆ. ನನಗೆ ಯಾವುದೇ ಅಸಮಾಧಾನವಿಲ್ಲ, ನಾನು ಸಂತೋಷವಾಗಿದ್ದೇನೆ.

Facebook Comments

Sri Raghav

Admin