ಮೈಸೂರಲ್ಲಿ ಹೊತ್ತಿ ಉರಿದ ಅಗರಬತ್ತಿ ಗೋದಾಮು

ಈ ಸುದ್ದಿಯನ್ನು ಶೇರ್ ಮಾಡಿ

Mysuru--01

ಮೈಸೂರು, ಜೂ.10-ನಗರದ ರಂಗರಾವ್ ಅಂಡ್ ಸಂಸ್ ಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ ಅಗರಬತ್ತಿ ತಯಾರಾಕ ಕಚ್ಚಾ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಮೈಸೂರು-ಮಾನಂದವಾಡಿ ರಸ್ತೆಯ ಅಶೋಕಪುರ ರೈಲ್ವೆ ನಿಲ್ದಾಣದ ಸಮೀಪವಿರುವ ರಂಗರಾವ್ ಅಂಡ್ ಸನ್ಸ್‍ಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತೀವ್ರತೆ ಹೆಚ್ಚಾಗಿ ಗೋದಾಮಿನ ಹೊರಗೂ ಹೊಗೆ ಆವರಿಸಿದಾಗ ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಐದು ಅಗ್ನಿಶಾಮಕ ವಾಹನಗಳು ಹರಸಾಹಸಪಟ್ಟು ಗೋದಾಮನ್ನು ಆವರಿಸಿದ್ದ ಬೆಂಕಿಯನ್ನು ನಂದಿಸಿದೆ. ಅಗರಬತ್ತಿ ತಯಾರಿಕೆಗೆ ಬಳಸಲಾಗುವ ಕಚ್ಚಾವಸ್ತುಗಳು, ಸಿದ್ಧಪಡಿಸಲಾದ ಅಗರಬತ್ತಿ, ಪ್ಯಾಕಿಂಗ್ ವಸ್ತುಗಳು ಹಾಗೂ ಅಗರಬತ್ತಿ ತಯಾರಿಕೆಯ ಉಪಕರಣಗಳೂ ಕೂಡ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Facebook Comments

Sri Raghav

Admin