ಡಿಸಿಎಂ ಪರಮೇಶ್ವರ್ ಬೆಂಗಳೂರು ಸಿಟಿ ರೌಂಡ್ಸ್

ಈ ಸುದ್ದಿಯನ್ನು ಶೇರ್ ಮಾಡಿ

DCM--city-round-2

ಬೆಂಗಳೂರು, ಜೂ.11- ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇಂದು ನಗರದ ವಿವಿಧೆಡೆ ಕೆರೆ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದರು. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಪರಂ ಅವರೊಂದಿಗೆ ಮೇಯರ್ ಸಂಪತ್‍ರಾಜ್ ಕೂಡ ಸಾಥ್ ನೀಡಿದರು.

DCM--city-round

ಮೊದಲು ಸಿವಿ ರಾಮನ್ ನಗರ ಕ್ಷೇತ್ರದ ಕಗ್ಗದಾಸಪುರ ಕೆರೆ ತಪಾಸಣೆ ನಡೆಸಿ ಬಳಿಕ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಬೆಳ್ಳಂದೂರು ಕೆರೆ ಪ್ರದೇಶಕ್ಕೆ ಭೇಟಿ ನೀಡಿದಾಗ ಸ್ಥಳೀಯರು ಹೂಳು ತೆಗೆಯುವುದು, ಮಳೆ ನೀರುಗಾಲುವೆ, ಶುಚಿತ್ವ , ಒತ್ತುವರಿ ತೆರವು ಸೇರಿದಂತೆ ಹಲವು ಸಮಸ್ಯೆಗಳನ್ನು ತಿಳಿಸಿದರು. ಕಾಕತಾಳೀಯವೆಂಬಂತೆ ಕೆರೆಯಿಂದ ನೊರೆ ಡಿಸಿಎಂ ಕಡೆಗೂ ಹರಿದು ಬಂತು. ಕೂಡಲೇ ಮಾಧ್ಯಮದವರು ಅದನ್ನು ಚಿತ್ರೀಕರಿಸಲು ಮುಂದಾದರು. ನೊರೆಯ ಮೇಲೆ ಸಿಂಕ್ಲರ್‍ನಿಂದ ನೀರು ಸಿಂಪಡಿಸಿ ನೊರೆ ಏಳದಂತೆ ಮಾಡಿದ್ದರೂ ಸಹ ಪ್ರಾತ್ಯಕ್ಷಿಕವಾಗಿಯೇ ಡಿಸಿಎಂ ಮೇಲೆ ನೊರೆಗಳು ಬಂದಿತು.

DCM--city-round-1

DCM--city-round-3 DCM--city-round-4

ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ 3 ತಿಂಗಳೊಳಗೆ ಇದರ ಬಗ್ಗೆ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.  ಕಗ್ಗದಾಸನಪುರ ಕೆರೆಯ ವ್ಯಾಪ್ತಿಯಲ್ಲಿ ಸುಮಾರು 11 ಎಕರೆ ಒತ್ತುವರಿಯಾಗಿದೆ. ಕೆರೆಯ ಅಭಿವೃದ್ಧಿಗಾಗಿ ಸುಮಾರು 2 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಲಾಗಿದ್ದು, ಯಾವುದೇ ಪ್ರಗತಿ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ಎಸ್‍ಟಿಪಿ ಪ್ಲಾಂಟ್ ಅನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕೆ ಜಾಗ ಮಂಜೂರಿಗೂ ಕೂಡ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದೇನೆ ಎಂದರು. ಬಂದ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಿ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಅವರು ಸುದ್ದಿಗಾರರಿಗೆ ತಿಳಿಸಿದರು.

Facebook Comments